ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮತ್ತು ಅವರ ಪ್ರತಿಭೆಗಳನ್ನು ಹೊರ ಹಾಕುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಸಹಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್


ನಾಯಕನಹಟ್ಟಿ:: ಸಮೀಪದ ಮಲ್ಲೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಅವರಣದಲ್ಲಿ 2022-23 ನೇ ಸಾಲಿನ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ರವರು ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ ಮಕ್ಕಳಿಗೆ ಮಕ್ಕಳಿಗೆ ಪ್ರತಿಭಾ ಕಾರಂಜಿ ಎಂಬುವುದು ಅವರಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು, ಕಾರ್ಯಕ್ರಮದಲ್ಲಿ ಅಳವಡಿಸಿರುವ ಬೇರೆ ಬೇರೆ ಸ್ಪರ್ಧೆ ಮೂಲಕ ಹೊರತೆಗೆಯುವುದು.. ಇದೊಂದು ರೀತಿಯ ಚಿಣ್ಣರ ಕಲರವ ಇದ್ದಂತೆ, ಮಕ್ಕಳಿಗೆ ಇದೊಂದು ಉತ್ತಮ ವೇದಿಕೆ ವಿಜೇತ ಮಕ್ಕಳು ರಾಜ್ಯ ಹಂತದವರೆಗೂ ಹೋಗಲು ಅವಕಾಶ ಇದೆ ಚೆನ್ನಾಗಿ ನಡೆಯಿಸಿ ಉತ್ತಮ ಫಲಿತಾಂಶ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹೇಳಿದ್ದಾರೆ.


ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗುತ್ತದೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುನಾಥ್ ಹೆಚ್ ಓ,ಸೋಮಶೇಖರೆಡ್ಡಿ, ಮಲ್ಲಯ್ಯ ಡಿ. ಹೆಚ್ ಗುತ್ತಿಗೆದಾರರು, ರಾಮರೆಡ್ಡಿ, ಮೋಹನ್ ರೆಡ್ಡಿ,ತಿಪ್ಪೇಸ್ವಾಮಿ ಮೂಗಬಸವೇಶ್ವರ ಶಾಲೆ ಕಾರ್ಯದರ್ಶಿ,SDMC ಅಧ್ಯಕ್ಷರಾದ ಜಯಣ್ಣ ಇವರು ಮಕ್ಕಳಿಗೆ ಬಹುಮಾನ ದಾನಿಗಳಾಗಿ ಸಹಕಾರ ನೀಡಿದರು…

ಹಾಗೂ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಲಕ್ಷ್ಮಿ, ಉಪಾಧ್ಯಕ್ಷರಾದ ಕಾಟಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಇನಾಯತ್ ಪಾಷಾ, ECO ಈರಸ್ವಾಮಿ,ಮುಖಂಡರಾದ ಮ್ಯಾಕಲಯ್ಯ, ಸಣ್ಣ ಮಲ್ಲಯ್ಯ, ಸಣ್ಣ ಪಾಲಯ್ಯ, ಗ್ರಾಮ ಪಂಚಾಯಿತಿ ಸದಸ್ಯರು, ಎಸ್. ಡಿ. ಎಂ ಸಿ ಸದಸ್ಯರು ಮೂಗಬಸವೇಶ್ವರ ಶಾಲೆಯ ಕಾರ್ಯದರ್ಶಿ ಕೆ ಆರ್ ತಿಪ್ಪೇಸ್ವಾಮಿ ಮುಖ್ಯ ಶಿಕ್ಷಕಿ ಶ್ರೀಮತಿ ಟಿ ಸೌಭಾಗ್ಯ ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಕ್ಲಸ್ಟರ್ ನ ಎಲ್ಲಾ ಶಿಕ್ಷಕ ಸಿಬ್ಬಂದಿ, ತೀರ್ಪುಗಾರ ಸಿಬ್ಬಂದಿ.. ಹಾಜರಿದ್ದು..

ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.. ಮಲ್ಲೂರಹಳ್ಳಿ ಕ್ಲಸ್ಟರ್ ನ ಎಲ್ಲಾ ಶಾಲೆಯವರಿಗೆ ಬಹುಮಾನ ಬಂದಿದ್ದು ವಿಶೇಷವಾಗಿತ್ತು.. ಮಕ್ಕಳ ಸಂತೋಷ ಇಮ್ಮಡಿಸಿತು

About The Author

Namma Challakere Local News
error: Content is protected !!