ಒತ್ತಡ ಮುಕ್ತ ಜೀವನಕ್ಕೆ ಸಂಗೀತ ಸಹಕಾರಿ ಪಿ.ಜಿ.‌ಬೋರನಾಯಕ.

ನಾಯಕನಹಟ್ಟಿ- ಕಲಾವಿದರಿಗೆ ಪ್ರೋತ್ಸಾಹ ಮುಖ್ಯ ಜೋಗಿಹಟ್ಟಿ ಗ್ರಾಮ ಕಲೆಯ ತವರೂರು ಎಂದು ಬಗರ್ ಹುಕುಂ ಕಮಿಟಿ ಸದಸ್ಯ ಪಿ ಜಿ ಬೋರನಾಯಕ ಕರೆ ನೀಡಿದರು.

ಮಂಗಳವಾರ ರಾತ್ರಿ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಗಿಹಟ್ಟಿ ಗ್ರಾಮದಲ್ಲಿ ಶ್ರೀ ಬಾಲರಂಗನಾಥ ಸ್ವಾಮಿ ಗುಗ್ಗರಿ ಹಬ್ಬದ ಪ್ರಯುಕ್ತ ಶ್ರೀ ರಂಗನಾಥಸ್ವಾಮಿ ಯುವ ನಾಟಕ ಸಂಘ ವತಿಯಿಂದ ಸಾವು ತಂದ ಸೌಭಾಗ್ಯ ಅರ್ಥಾರ್ಥ ಹರಿಶಿನ ತಂದ ಆಮಂತ್ರಣ ಎಂಬ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು ಜೋಗಿಹಟ್ಟಿ ಬಹುದೊಡ್ಡ ಗ್ರಾಮದಲ್ಲಿ ವರ್ಷಕ್ಕೆ ಸುಮಾರು ಹತ್ತರಿಂದ ಹದಿನೈದು ನಾಟಕ ಪ್ರದರ್ಶನ ವಾಗುತ್ತವೆ ಜೋಗಿಟ್ಟಿ ಕಲೆಗೆ ಬಹಳ ಪ್ರಸಿದ್ಧಿ ಪಡೆದಿದೆ ಯುವಕರು ಮತ್ತು ಗ್ರಾಮಸ್ಥರು ಕಲೆಗೆ ಹೆಚ್ಚಿನ ಆದ್ಯತೆ ನೀಡಬೇಕು ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು

ಗೌಡಗರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ
ಟಿ .ರಂಗಪ್ಪ ಮಾತನಾಡಿದರು ಧಾರ್ಮಿಕ ಕಾರ್ಯಗಳನ್ನು ಮಾಡಲು ಜೋಗಿಹಟ್ಟಿ ಗ್ರಾಮಸ್ಥರು ಇಡೀ ಜಿಲ್ಲೆಗೆ ಪ್ರೇರಣೆ.
ಗ್ರಾಮದಲ್ಲಿ ಯಾವುದೇ ದೇವರ ಕಾರ್ಯ ಮಾಡಲು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಶಿಸ್ತು ಬದ್ಧವಾಗಿ ದೇವರ ಕಾರ್ಯ ಮಾಡುತ್ತಾರೆ ಪೂರ್ವಜರ ಕಾಲದಿಂದಲೂ ಗೌಡಗೆರೆ ಮತ್ತು ಜೋಗಿಹಟ್ಟಿಗೆ ಅವಿನಾಭಾವ ಸಂಬಂಧ ಎರಡು ಗ್ರಾಮಗಳ ಜನರು ಅಣ್ಣ-ತಮ್ಮಂದಿರಂತೆ ದೇವರ ಕಾರ್ಯದಲ್ಲಿ ಭಾಗಿಯಾಗುವುದು ಸಂತಸದ ಸಂಗತಿ ಎಂದರು.

ಮುಖಂಡ ಎಂ.ಜಿ ತಿಪ್ಪೇಸ್ವಾಮಿ, ಎಚ್. ಸಿ. ತಿಪ್ಪೇಸ್ವಾಮಿ ಮಾಜಿ ಅಧ್ಯಕ್ಷರು ಕಾಂಗ್ರೆಸ್ ಮುಖಂಡರು ಜೋಗಿಹಟ್ಟಿ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜಮ್ಮ ರಂಗಸ್ವಾಮಿ, ಸದಸ್ಯರಾದ ಜಿ.ಓ. ಓಬಳೇಶ್, ರೇವಮ್ಮ ಡಿ.ಕೆ. ಬಸವರಾಜ್, ಎಸ್ ಸಿ ನಾಗಪ್ಪ, ಬಿ ಮಂಜಮ್ಮ ಡಿ.ಜಿ. ಗೋವಿಂದಪ್ಪ, ಆರೋಗ್ಯ ಇಲಾಖೆ ಬಿ. ಬಾಲು ಜೋಗಿಹಟ್ಟಿ, ಪಿ ಎ ಸಿ ಎಸ್ ನಿರ್ದೇಶಕ ರಾಜಣ್ಣ ಚನ್ನಬಸಯ್ಯನಹಟ್ಟಿ, ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ತಿಪ್ಪೇಸ್ವಾಮಿ ಗೌಡಗೆರೆ, ಬಿ .ಯರ್ರಿಸ್ವಾಮಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹೊಸ ಜೋಗಿಹಟ್ಟಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಹೆಚ್ .ಬಿ. ತಿಪ್ಪೇಸ್ವಾಮಿ, ಜಿ.ಸಿ. ಬಾಲರಾಜ್, ಸಂಗೀತ ನಿರ್ದೇಶಕ ಕೆ. ನಾಗೇಂದ್ರಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ಎಸ್ ಬಿ ತಿಪ್ಪೇಸ್ವಾಮಿ, ಕರವೇ ಕನ್ನಡ ಸೇನೆ ಹೋಬಳಿ ಘಟಕ ಅಧ್ಯಕ್ಷ ಕೆ.ಜಿ. ಮಂಜಣ್ಣ, ಎಸ್. ಜಿ .ವೆಂಕಟೇಶ್ ಗುತ್ತಿಗೆದಾರರು ಜೋಗಿಹಟ್ಟಿ, ಸೇರಿದಂತೆ ಸಮಸ್ತ ಜೋಗಿಹಟ್ಟಿ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!