ಚಳ್ಳಕೆರೆ : ಆಧುನಿಕ ಯಾಂತ್ರಿಕ ಬದುಕಿನಲ್ಲಿ ಸಂಸ್ಕಾರ ಮರೆಯಾಗುತ್ತಿದ್ದು, ದೇವಾಲಯಗಳಂತಹ ಭಕ್ತಿಯ ಸೂಚಕಗಳಿಂದ ಸಂಸ್ಕಾರ ಉಸಿರಾಡುತ್ತಿದೆ ಎಂದು ಶ್ರೀ ವೀರಭದ್ರಪ್ಪ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಬೆಂಗಳೂರು ರಸ್ತೆಯಲ್ಲಿ ಇರುವ ನರಹರಿ ನಗರದಲ್ಲಿ ಶ್ರೀ ಕರಿಬಸವೇಶ್ಚರ ಸ್ವಾಮಿಯ ನೂತನ ದೇವಾಲಯ ಹಾಗೂ ವಿಗ್ರಹ ಪ್ರತಿಷ್ಟಾಪನೆ, ಧಾರ್ಮಿಕ ಸಭೆಯಲ್ಲಿ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.

ಇವತ್ತಿನ ದಿನಗಳಲ್ಲಿ ದೇವಸ್ಥಾನಗಳು ಹೆಚ್ಚಾಗುತ್ತಿವೆ. ಆದರೆ ಸಂಸ್ಕಾರಗಳು ಕಡಿಮೆಯಾಗುತ್ತಿವೆ. ದೇವಸ್ಥಾನಗಳನ್ನು ಆಢಂಬರ, ಆಚರಣೆಗೆ ಸೀಮಿತವಾಗಿಸಿದ್ದು, ಪೂಜೆಗಳು ತೋರ್ಪಡಿಕೆಯಾಗಿವೆ.
ಸಮಾಜದ ಒಳಿಗಾಗಿ ನಡೆಸುವ ಪೂಜೆಯಷ್ಟೇ ಪ್ರಾಮುಖ್ಯತೆಯನ್ನು, ನಮ್ಮ ಒಳಿತಿಗಾಗಿ ಭಕ್ತಿಯನ್ನು ಸಿದ್ಧಿಸಿಕೊಳ್ಳಬೇಕಿದ್ದು, ನೆಮ್ಮದಿಯ ಬದುಕಿನೆಡೆಗೆ ಸಾಗಬೇಕಿದೆ. ಭಾರತದ ಆತ್ಮ ಆಧ್ಯಾತ್ಮವಾಗಿದ್ದು, ಈ ಪರಂಪರೆಯಲ್ಲಿ ಆಚರಣೆಗಳು, ಬದುಕಿನ ಭಾಗವಾಗಿವೆ. ಹಾಗಾಗಿ ಈ ಧಾರ್ಮಿಕ ಆಚರಣೆಗಳು ಭಾರತೀಯರ ಜೀವನಾಡಿಗಳಾಗಿವೆ ಎಂದರು.

ಹಿಂದೆ ಒಂದು ಪುಟ್ಟ ದೇವಾಲಯವಿತ್ತು. ಇದೀಗ ವೈಭದ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ನರಹರಿ ಭಕ್ತರ ಇಷ್ಟಾರ್ಥ ಸದ್ದಿಸಲು ಶ್ರೀ ಕರಿಬಸವೇಶ್ವರ ದೇವಾಲಯ ನಿರ್ಮಾಣದಲ್ಲಿ ಮನಸ್ಸಿಗೆ ತೃಪ್ತಿ ತಂದಿದೆ. ಅದರಿಂದ ಮತ್ತಷ್ಟು ಸೇವೆ ಮಾಡಬೇಕೆಂಬ ಮಹಾದ್ದಾಸೆ ಹೆಚ್ಚಿದೆ ಎಂದು ಸಂತಸ ಹಂಚಿಕೊಂಡರು.

ಇನ್ನೂ ನಗರದ ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ಶ್ರೀ ಚಳ್ಳಕೆರಮ್ಮ ದೇವರ ಆರ್ಶಿವಾದ ಪಡೆದು ನಂತರ ಬೆಂಗಳೂರು ರಸ್ತೆಯ ಮೂಲಕ ಪೂರ್ಣಕುಂಭದೊಂದಿಗೆ ನೂರಾರು ಮಹಿಳೆಯರು, ಡೊಳ್ಳು ವಾಧ್ಯದೊಂದಿಗೆ ಸಾವಿರಾರು ಭಕ್ತರು ಶ್ರೀ ಕರಿಬಸವೇಶ್ವರ ವಿಗ್ರಹ ದೊಂದಿಗೆ ಮೂಲ ಸನ್ನಿಧಿಗೆ ಆಗಮಿಸಿತು.

ಇದೇ ಸಂಧರ್ಭದಲ್ಲಿ
ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ಶ್ರೀ ವೀರಭದ್ರಪ್ಪ ಸ್ವಾಮಿ, ಶಿವನಾಗಪ್ಪ, ದಯಾನಂದ ಪ್ರಹ್ಲಾದ, ಮಾರುತಿ, ಮಲ್ಲೇಶ, ಮೃತ್ಯುಂಜಯ, ಹಾಗೂ ಇತರರು ಇದ್ದರು.

ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
ಅಂಗವಾಗಿ ನಗರದಲ್ಲಿ ಭಕ್ತರು ಬೈಕ್ ಯಾರ್ಲಿ ನಡೆಸಿ ಜಾಗೃತಿ ಮೂಡಿಸಿದರು.

ಚಳ್ಳಕೆರೆ ನಗರದ ನರಹರನಗರದಲ್ಲಿ ಫೆ.11,12 ರಂದು ನಡೆಯುವ ಶ್ರೀ ಕರಿಬಸವೇಶ್ವರ ವಿಗ್ರಹ ಪ್ರತಿಷ್ಠಾಪನೆಗೆ ಶ್ರದ್ಧಾ ಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಗುತ್ತದೆ ಎಂದು ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ಸ್ವಾಮೀಜಿ ಹೇಳಿದರು.

ಬೈಕ್ ಯಾರ್ಲಿ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಿಂದ ಬಾಬು ಜನಜೀವನ್ ರಾಮ್ ವೃತ್ತ, ಕನಕ ವೃತ್ತ, ವಾಲ್ಮಿಕಿ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ನೆಹರು ವೃತ್ತದ ಮೂಲಕ ಬಳ್ಳಾರಿ ರಸ್ತೆಯ ಮೂಲಕ ಚಳ್ಳಕೆರಮ್ಮ ದೇವಸ್ಥಾನ, ಶ್ರೀ ವೀರಭದ್ರಪ್ಪಸ್ವಾಮಿ ದೇವಸ್ಥಾನ ದಿಂದ ಬೆಂಗಳೂರು ರಸ್ತೆಯ ಮೂಲಕ ಸ್ವಾಮಿ ಸನ್ನಿದಿಗೆ ನೂರಾರು ಭಕ್ತರು ಬೈಕ್ ಯಾರ್ಲಿ ಮೂಲಕ ತೆರಳಿದರು.

About The Author

Namma Challakere Local News
error: Content is protected !!