ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 77ನೇ ಗಣರಾಜ್ಯೋತ್ಸವ : ಶಾಸಕ ಟಿ.ರಘುಮೂರ್ತಿ

77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಂದೇಶ

ಚಳ್ಳಕೆರೆ : ಭಾರತದ ಮಹಾ ಮಾನವತಾವಾದಿ ಸಮತೆಯ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ , ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಮ್ಮೆಯ ದೇಶ ಭಾರತದಂತಹ ಬಹು ಸಂಸ್ಕೃತಿಯ ಬೃಹತ್ ದೇಶಕ್ಕೆ ನಿತ್ಯ ನೂತನವೂ, ಸತ್ಯ ಚೇತನವಾದ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 77ನೇ ಗಣರಾಜ್ಯೋತ್ಸವಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ನಗರದ ಬಿಎಂಜಿಹೆಚ್‌ಎಸ್ ಬಯಲು ರಂಗಮಂದಿರ ಆವರಣದಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು,

ಯುವಜನರಲ್ಲಿ ಸ್ಪೂರ್ತಿ ತುಂಬಿದ ಮಹಾನ್ ಯುಗಪುರುಷರು ಬುಧ್ದ, ಬಸವ ಡಾ.ಬಿಆರ್.ಅಂಬೇಡ್ಕರ್ ಈಗೇ ಅನೇಕ ಮಂದಿ ತಮ್ಮ ಪ್ರಾಣವನ್ನು ಪಣಕಿಟ್ಟು ನಮಗೆ ಸ್ವಾತಂತ್ರ್ಯವನ್ನು ತಂದು ಜನ ಸಾಮಾನ್ಯರ ಏಳಿಗೆಗೆ ಕಾನೂನುಗಳ ತಂದು ಕೊಟ್ಟ ಸುದಿನ ಈ ಗಣರಾಜ್ಯೋತ್ಸವವಾಗಿದೆ ಎಂದರು.

ಕಳೆದ ಮೂರು ಬಾರಿ ಕ್ಷೇತ್ರದ ಶಾಸಕರನ್ನಾಗಿ ಮಾಡಿದ ಜನತೆಗೆ ಅಗತ್ಯವಾದ ಮೂಲ ಭೂತಸೌಲಭ್ಯ ನೀಡುವುದು ನಮ್ಮ ಆಧ್ಯ ಕರ್ತವ್ಯ, ಅದರಂತೆ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದೆನೆ, ಎಲ್ಲಾ ವರ್ಗದ ಜನರ ಹಿತ ರಕ್ಷಣೆಯ ಮೂಲಕ ಕ್ಷೇತ್ರದ ಜನರ ಸಹಕಾರ ತುಂಬಾ ಮುಖ್ಯ ಅಂತಹ ಅವಕಾಶ ಕೊಟ್ಟ ಮತದಾರರಿಗೆ ನಾನು ಸದಾ ಋಣಿಯಾಗಿರುತ್ತೆನೆ, ಈಗೇ ಅಭಿವೃದ್ಧಿ ಪೂರಕವಾಗಿ ಕೆಲಸವನ್ನು ಮಾಡಲು ರಾಜಾಕೀಯ ಶಕ್ತಿ ನೀಡಿದ ಮತದಾರರು ಮೂರನೇ ಬಾರಿಗೆ ಶಾಸಕನನ್ನಾಗಿ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದರು.

ಇನ್ನೂ ತಾಲ್ಲೂಕಿನ ದಂಢಾಧಿಕಾರಿಗಳಾದ ತಹಶೀಲ್ದಾರ್ ರೇಹಾನ್ ಪಾಷ ಧ್ವಜಾರೋಹಣ ನೆರೆವೆರಿಸಿ ನಂತರ ಮಾತನಾಡಿದ ಅವರು,
ಈ ದಿನ ಪ್ರಜಾಪ್ರಭುತ್ವದ ಹಬ್ಬ ಎಂದರೆ ತಪ್ಪಾಗಲಾರದು ಎಲ್ಲರಿಗೂ
77ನೇ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಷಯಗಳು
ಏಕೆಂದರೆ ಭಾರತ ಒಂದು ಸಾರ್ವಭೌಮ ರಾಷ್ಟ್ರ, ಸಮಾಜವಾದಿ ರಾಷ್ಟ್ರ, ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಜಾತ್ಯತೀತ ರಾಷ್ಟ್ರವೂ ಆಗಿದೆ.
ಪ್ರಜಾಪ್ರಭುತ್ವದ ಅಧಿಕಾರ ಇರುವುದು ಪ್ರಜೆಗಳಲ್ಲಿ,
ಚುನಾಯಿತ ಪ್ರತಿನಿಧಿಗಳು ಸಂವಿಧಾನಕ್ಕೆ ಬದ್ಧರಾಗಿ ಅಧಿಕಾರ ನಡೆಸುತ್ತಾರೆ. ಹಾಗಾಗಿ ತಮ್ಮ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು.

ಗಣತಂತ್ರದ ವ್ಯವಸ್ಥೆಯಲ್ಲಿರುವ ನಾವೆಲ್ಲರೂ ಸಂವಿಧಾನದ
ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಆಗ ಮಾತ್ರ ದೇಶದ ಗಣರಾಜ್ಯ ಹಾಗೂ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದು ಹೇಳುತ್ತಾ ಎಲ್ಲರಿಗೂ ಮತ್ತೊಮ್ಮೆ
77ನೇ ಗಣರಾಜ್ಯೋತ್ಸವದ ಶುಭಾಷಯಗಳನ್ನು ಕೋರುತ್ತೆನೆ ಎಂದು ಗಣರಾಜ್ಯೋತ್ಸವದ ಸಂದೇಶ ಸಾರಿದರು.

ಗಣರಾಜ್ಯೋತ್ಸವ ದಿನ ಸಾಂಸ್ಕçತಿಕ ಗೀತೆಗಳ ಮೂಲಕ ದೇಶಕ್ಕಾಗಿ ಮಡಿದ ವೀರರ ಚರಿತ್ರೆಯನ್ನು ನಾಡಿನ ಜನತೆಗೆ ನೃತ್ಯದ ಮೂಲಕ ಹರಿವು ಮೂಡಿಸುವ ಮೂಲಕ ವಿವಿಧ ಶಾಲೆಯ ಮಕ್ಕಳು ನೃತ್ಯವನ್ನು ಮಾಡಿದರು. ವಿಶೇಷವಾಗಿ ಅಂಬೇಡ್ಕರ್ ಒಳಗೊಂಡ ‌ಗೀತೆಗೆ ಮಕ್ಕಳ ಪ್ರದರ್ಶನ ಗಮನ ಸೆಳೆಯಿತು.

ಇದೇ ಸಂಧರ್ಭದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ತಹಶಿಲ್ದಾರ್ ರೇಹಾನ್ ಪಾಷ, ಇಓ ಶಶಿಧರ್, ಸಿಡಿಪಿಓ ರಾಜು ನಾಯ್ಕ್, ಆರೋಗ್ಯ ಇಲಾಖೆಯ ಡಾ.ಕಾಶಿ, ಕುದಾಪುರ ತಿಪ್ಪೇಸ್ವಾಮಿ,
ಬಿಇಓ ಕೆ.ಎಸ್.ಸುರೇಶ್, ಪೌರಾಯುಕ್ತ ಜಗರೆಡ್ಡಿ, ಕೃಷಿ ಅಧಿಕಾರಿ. ರಮೇಶ್, ಡಿವೈಎಸ್‌ಪಿ. ಸತ್ಯನಾರಾಯಣ ರಾವ್, ಸಿಪಿಐ ಮಂಜುನಾಥ್ ಶಿರೆಹಳ್ಳಿ, ಪಿಎಸ್‌ಐ ಶಿವರಾಜ್, ಧರೇಪ್ಪ ಬಾಳಪ್ಪ, ತೋಟಗಾರಿಕೆ ಅಧಿಕಾರಿ ರವಿಕುಮಾರ್, ಪಶು ಇಲಾಕೆ ವೈದ್ಯಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳ ತಾಲೂಕು ಅಧ್ಯಕ್ಷ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರು, ತಾಲೂಕು ಮಟ್ಟದ ಅಧಿಕಾರಿಗಳು ಮುಖಂಡರು ಹಾಗೂ ಮಕ್ಕಳು ಮತ್ತಿತರರು ಇದ್ದರು.

ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ
ಮಾಡಿದ ಮಾಧ್ಯಮ ಕ್ಷೇತ್ರದಲ್ಲಿ ರಘುನಾಗ್ ರವರನ್ನು ಸನ್ಮಾನಿಸಿದರು.

About The Author

Namma Challakere Local News
error: Content is protected !!