ಚಳ್ಳಕೆರೆ : ವಿದ್ಯಾರ್ಥಿ ದೆಸೆಯಿಂದಲೆ ವಿವಿಧ ಕ್ರೀಡೆ, ಹಾಗೂ ಕಲಿಕೆಯ ಸ್ಪರ್ಧಾಮನೋಭಾವ ಹೊಂದುವ ಮೂಲಕ ವಿದ್ಯಾರ್ಥಿಗಳು ಪ್ರತಿಭೆಯ ಮೂಲಕ ಹೊರಹೊಮ್ಮಬೇಕು ಎಂದು ಮುಖ್ಯ ಶಿಕ್ಷಕರಾದ ಆರ್, ಮಂಜುಳಾ ಹೇಳಿದರು.
ಅವರು ತಾಲೂಕಿನ ತಿಮ್ಮಪ್ಪಯ್ಯನಹಳ್ಳಿಯ
ಸರ್ಕಾರಿ ಪ್ರೌಢಶಾಲೆಯಲ್ಲಿ “ಇಂಗ್ಲೀಷ್ ವಿಷಯದಲ್ಲಿ ರಂಗೋಲಿ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು,
ಆಂಗ್ಲ ಮಾಧ್ಯಮ ಕಲಿಕೆ ಎಂಬುದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಬ್ಬಿಣದ ಕಡಲೆ ಆದರೆ ಇದನ್ನು ಹೋಗಲಾಡಿಸಲು ಇಂತಹ ಪಠ್ಯ ಆಧರಿತ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಆಸಕ್ತಿದಾಯಕವಾಗಿ ಕಲಿಯುತ್ತಾರೆ ಎಂದರು
ಇನ್ನೂ ಆಂಗ್ಲ ಮಾಧ್ಯಮ ಶಿಕ್ಷಕರಾದ ವಿಜಯಕಲಾ ಮಾತನಾಡಿ, ಆಂಗ್ಲ ಮಾಧ್ಯಮ ಕಲಿಕೆಗೆ ಹಿಂಬು ನೀಡಲು ಇಂತಹ ಸ್ಪರ್ಧೆ ವರದಾನವಾಗಲಿದೆ, ಈ
ಸ್ಪರ್ಧೆಯಲ್ಲಿ ಎಂಟನೇ ತರಗತಿಯಲ್ಲಿ “ಶಶಿದೇಶಪಾಂಡೆ” ತಂಡ, 9ನೇ ತರಗತಿಯಲ್ಲಿ “ಜಾನಕೀಟ್ಸ್” ತಂಡ, 10ನೇ ತರಗತಿಯಲ್ಲಿ “ವಿಲಿಯಂ ಶೇಕ್ಸ್ಪಿಯರ್” ತಂಡಗಳು ಪ್ರಥಮ ಬಹುಮಾನ ಗಳನ್ನು ಪಡೆದವು ಎಂದು ಮಾಹಿತಿ ನೀಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯ ಹತ್ತಿರ ವಾದ್ದರಿಂದ ಮಕ್ಕಳು ಆಕರ್ಷಣೆಯಿಂದ ಹಾಗೂ ತಮ್ಮ ಗುಂಪು ಗೆದ್ದು ಬಹುಮಾನ ಪಡೆಯುವ ನಿಟ್ಟಿನಲ್ಲಿ, ಸ್ಪರ್ಧಾತ್ಮಕವಾಗಿ, ಸೃಜನಾತ್ಮಕವಾಗಿ ಕ್ರಿಯಾಶೀಲತೆಯಿಂದ, ಭಾಗವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಈ ತಂತ್ರವನ್ನು ಬಳಸಲಾಯಿತು.
ಇದರಿಂದ ಮಕ್ಕಳು ವಿಶೇಷ ಆಸಕ್ತಿಯನ್ನು ಹೊಂದಿದ್ದರು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಆರ್, ಮಂಜುಳಾ, ಆಂಗ್ಲ ಮಾಧ್ಯಮ ಶಿಕ್ಷಕರಾದ ವಿಜಯಕಲಾ,
ಸಹಶಿಕ್ಷಕರಾದ ಶಿವಕುಮಾರ್, ದಾದಾಪೀರ್, ಜಾಕೀರ್, ದಿವ್ಯ, ಶೇಖರಪ್ಪ, ಗುರುಮೂರ್ತಿ, ಕುಸುಮ, ಅನಸೂಯ, ಮಕ್ಕಳು ಹಾಜರಿದ್ದರು.

