filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಚಳ್ಳಕೆರೆ : ಸಾರ್ವಜನಿಕರಿಗೆ ಮಲ ಬಾಧೆಯನ್ನು ನಿವಾರಿಸಿಕೊಳ್ಳಲು ನಗರಸಭೆಯ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ನಿರ್ಮಿಸಿದ ಹೆಣ್ಣು ಗಂಡು ಪ್ರತ್ಯೇಕ ನೂತನ ಶೌಚಾಲಯಗಳು ಪಾಳು‌ ಬೀಳುವಂತಾಗಿವೆ.

ಹೌದು ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಸಮೀಪದ ಕ್ರೀಡಾಂಗಣದ ರಸ್ತೆ ಪಕ್ಕದಲ್ಲಿ ನಿರ್ಮಿಸಿದ ಶೌಚಾಲಯಗಳು ಉದ್ಘಾಟನೆ ಭಾಗ್ಯ ಇಲ್ಲದೆ ಮೂಲೆ ಗುಂಪಾಗಿ ಉಳಿದಿವೆ.

ನೂತನ ಕಟ್ಟಡದಲ್ಲಿ ಹೆಣ್ಣು ಗಂಡು ಪ್ರತ್ಯೇಕ ಶೌಚಾಲಯ ನಿರ್ಮಿಸಿದ್ದಾರೆ. ಆದರೆ ಆದ್ಯಾಕೋ ಸಾರ್ವಜನಿಕರು ಬಳಕೆಗೆ ಬಿಡದೆ ಬೀಗ ಜಡಿದಿದ್ದಾರೆ.

ಇನ್ನೂ ಮಲಬಾಧೆ ನಿವಾರಿಸಲು ಸಾರ್ವಜನಿಕರು ‌ಬಯಲು ಶೌಚಾಲಯಕ್ಕೆ ತೆರಳಬೇಕಿದೆ, ಆದರೆ ಪುರುಷರಂತೆ ಹೇಗೋ ಮುಗಿಸುತ್ತಾರೆ ಆದರೆ ಮಹಿಳೆಯರ ಗೋಳಂತು ಕೇಳಬಾರದಾಗಿದೆ, .ಬಸ್ ನಿಲ್ದಾಣ ಸಮೀಪ ಒಂದು ಶೌಚಾಲಯ ಇಲ್ಲದೆ ಇರುವುದರಿಂದ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿನಿಯರು ನಗರಸಭೆಗೆ ಶಾಪಹಾಕುತ್ತಿದ್ದಾರೆ, ಹಾಗೂ ಅದೇ ರಸ್ತೆಯ ಮೇಲೆ ‌ದಿನ ನಿತ್ಯ‌ ಸಂಚರಿಸುವ ಜಿಲ್ಲಾ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ, ಈ ಶೌಚಾಲಯ ಬಳಕೆಯ ಬಗ್ಗೆ ಗಮನಹರಿಸಿಲ್ಲವೆಂಬುದು ಸಾರ್ವಜನಿಕರ ಆರೋಪಕ್ಕೆ ಸಾಕ್ಷಿಯಾಗಿದೆ.

About The Author

Namma Challakere Local News
error: Content is protected !!