ಚಳ್ಳಕೆರೆ : ವಾಲ್ಮೀಕಿ ಮ್ಯಾಸ ನಾಯಕರು ಹಾಗೂ ಕಾಡುಗೊಲ್ಲರು ಆಚರಿಸುವಂತಹ ಈ ಒಂದು ಧಾರ್ಮಿಕ ವಿಧಿ ವಿಧಾನಗಳು ಸಮಾಜದಲ್ಲಿ ಸಾಮರಸ್ಯಕ್ಕೆ ಪ್ರತಿಬಿಂಬವಾಗಿವೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರು ತಳಕು ಹೋಬಳಿಯ ಬೇಡರಹಳ್ಳಿ ಗ್ರಾಮದಲ್ಲಿ ಶ್ರೀ ಯರಮಂಚ ನಾಯಕ ಜಾತ್ರಾ ಮಹೋತ್ಸವದ ಅಂಗವಾಗಿ ಪೂಜೆ ಸಲ್ಲಿಸಿ ಮಾತನಾಡಿ ಚಿತ್ರದುರ್ಗದ ಮೊಣಕಾಲ್ಮೂರು ಮತ್ತು ಚಳಕೆರೆ ತಾಲ್ಲೂಕುಗಳು ಈ ಆಚರಣೆಗಳಿಂದ ಕಾರ್ಮಿಕ ನೆಲೆನಾಡಾಗಿ ಹೊರಹೊಮ್ಮಿದೆ ವರ್ಷಪೂರ್ತಿ ತಾಲೂಕುಗಳಲ್ಲಿ ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯುತ್ತದೆ ಕಠಿಣವಾದ ವ್ರತ ದೊಂದಿಗೆ ಭಕ್ತಾದಿಗಳು ಈ ಸ್ವಾಮಿಯನ್ನು ಆರಾಧಿಸುತ್ತಾರೆ
ಹಾಗಾಗಿ ಈ ಭಾಗಗಳಲ್ಲಿ ಹೆಚ್ಚು ಹೆಚ್ಚು ಸಾಮರಸ್ಯ ಉಳಿದುಕೊಂಡಿದೆ ಧರ್ಮದ ದಾರಿಯಲ್ಲಿ ಮತ್ತು ಸತ್ಯದ ದಾರಿ ಯಲ್ಲಿ ಬಹುಪಾಲು ಜನ ನಡೆದುಕೊಳ್ಳುತ್ತಾರೆ ಹಾಗಾಗಿ ಬೇರೆ ತಾಲೂಕುಗಳಿಗೆ ಮತ್ತು ಜಿಲ್ಲೆಗಳಿಗೆ ಈ ಭಾಗದ ಜನರು ಮಾದರಿಯಾಗಿದ್ದಾರೆ ಮುಂದಿನ ದಿನಗಳಲ್ಲಿ ಜನಜೀವನ ಉತ್ಕೃಷ್ಟ ಗೊಳಿಸಲು ಯರಮಂಚ ನಾಯಕರ ಆಶೀರ್ವಾದ ಮತ್ತು ಪ್ರೇರೇಪಣೆ ಭಕ್ತಾದಿಗಳ ಮೇಲಿರಲಿ ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಎತ್ನಟ್ಟಿ ಗೌಡ್ರು ಚಂದ್ರಣ್ಣ ತುಮಕೂರ್ ಹಳ್ಳಿ ಗೋಪಾಲಣ್ಣ ಮೊಳಕಾಲ್ಮೂರು ಸತ್ಯನಾರಾಯಣ ಪಾಲನಾಯಕನ ಕೋಟೆ ಬಸವರಾಜ್ ಸಮಸ್ತ ಮ್ಯಾಸಮಂಡಲದ ಭಕ್ತಾದಿಗಳು ಉಪಸ್ಥಿತರಿದ್ದರು

