ಚಳ್ಳಕೆರೆ :
ಮಾತಿಗೆ ತಪ್ಪಿದ ಸರ್ಕಾರದ ವಿರುದ್ಧ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಮಾಡಲು ಕರ್ನಾಟಕ ರಾಜ್ಯ‌ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಬೆಂಗಳೂರು ನಗರದ
ಫ್ರೀಡಂ ಪಾರ್ಕ್, ನಲ್ಲಿ ನಡೆಸಲು ಸಜ್ಜಾಗಿದ್ದಾರೆ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಚುನಾವಣಾ ಪೂರ್ವದಲ್ಲಿ ಬಿಜೆಪಿಯು ಜಾರಿಗೆ ತಂದಂತಹ ಅಪಾಯಕಾರಿ ಕೃಷಿ
ಕಾಯ್ದೆಗಳನ್ನು ರದ್ದು ಮಾಡುತ್ತೇವೆ ಎಂದು ಮತ್ತು ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆಗಳನ್ನು ಕೊಡುತ್ತೇವೆಂದು ಹೇಳಿ
ಅಧಿಕಾರಕ್ಕೆ ಬಂದಂತ ಈ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್‌ರವರು ಮಾತಿಗೆ ತಪ್ಪಿರುವುದರಿಂದ ಇವರನ್ನು ಎಚ್ಚರಿಸಲು ವಿಧಾನಸಭೆಯ ಅಧಿವೇಶನ ನಡೆಯುವ
ಸಂದರ್ಭದಲ್ಲಿ ದಿನಾಂಕ: 27/01/2026ರ ಮಂಗಳವಾರ ಬೆಳಗ್ಗೆ 10:00 ಗಂಟೆಯಿಂದ ಈ ಸತ್ಯಾಗ್ರಹ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಅವರು ಮಾಧ್ಯಮದೊಟ್ಟಿಗೆ ಮಾತನಾಡಿ, ಸರಕಾರವನ್ನು ಎಚ್ಚರಿಸುವ ಕೆಲಸಕ್ಕೆ ಎಲ್ಲಾ ರೈತರು
ರಾಜ್ಯದ ಜಿಲ್ಲೆ ತಾಲ್ಲೂಕು, ಹಳ್ಳಿಗಳಿಂದ ಬೃಹತ್ ಪ್ರಮಾಣದ ರೈತರು ಬಂದು ಭಾಗವಹಿಸಬೇಕು ಎಂದು ಕರೆ ನೀಡಿದರು.

About The Author

Namma Challakere Local News
error: Content is protected !!