ಚಳ್ಳಕೆರೆ : ರಾಜ್ಯ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಅಧಿಕಾರಿಗಳು ಯಾವುದೇ ಲೋಪ ಬಾರದಂತೆ ಸರ್ವ ಜನಾಂಗಕ್ಕೂ ತಲುಪಿಸುವಂತಹ ಕಾರ್ಯ ಮಾಡಬೇಕು ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು .
ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆ, ಜನರಿಗೆ ಹೊಟ್ಟೆ ತುಂಬಿಸುವಂತಹ ಕೆಲಸ ಆಗಬೇಕು, ಆದರೆ ಕೆಲ ಪಟ್ಟಭದ್ರ ರಿಂದ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ , ಆದ್ದರಿಂದ ಆಹಾರ ಇಲಾಖೆಯ ಶಿರಸ್ತೆದಾರುಗಳು ಕೂಡಲೇ ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ಚಿರಕುಗೊಳಿಸಬೇಕು ಬಡವರಿಗೆ ಹೊಟ್ಟೆ ತುಂಬಿಸುವಂತಹ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಯಾವುದೇ ಕಾರಣಕ್ಕೂ ತಪ್ಪು ದಾರಿಗೆ ಹೋಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇನ್ನೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್ .ಶಶಿಧರ್ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಕಿರಾಣಿ ಅಂಗಡಿಗಳು ಆಹಾರ ಪದಾರ್ಥ ಅಂಗಡಿಗಳಲ್ಲಿ ಯಾವುದೇ ಲೇಬಲ್ ಹಾಗೂ ಜಿಎಸ್‌ಟಿ ಇಲ್ಲದೆ ಮಾರಾಟ ಮಾಡುವ ಅಕ್ಕಿ ಪ್ಯಾಕೆಟ್ ಗಳನ್ನು ಕೂಡಲೇ ವಶಕ್ಕೆ ಪಡೆದು ಪ್ರಕರಣ ದಾಖಲಿಸಬೇಕು, ಗೊಬ್ಬರದ ಚೀಲಗಳಲ್ಲಿ, ಯಾವುದೇ ಲೇಬಲ್ ಇಲ್ಲದಂತಹ ಚೀಲಗಳಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದು ಕಂಡು ಬಂದಿದೆ.
ಆದ್ದರಿಂದ ಈ ಕೂಡಲೇ ಎಲ್ಲಾ ಅಂಗಡಿ ಮುಗ್ಗಟ್ಟುಗಳಿಲ್ಲಿ ಪರಿಶೀಲಿಸಿ ಕಂಪನಿಯ ಸೀಲ್ ಹಾಗೂ ಹೆಸರು ನಮೂದು ಆಗದೆ ಇರುವಂತಹ ಅಕ್ಕಿ ಪ್ಯಾಕೆಟ್ ಕಂಡು ಬಂದರೆ ವಶಕ್ಕೆ ಪಡೆದು ಅಂಗಡಿಯ ಮೇಲೆ ಪ್ರಕರಣ ದಾಖಲಿಸಬೇಕು ಇನ್ನು ಶಿಶು ವಿಹಾರಗಳಿಗೆ ನೀಡುವಂತಹ ಪಾಕೆಟ್ ಗಳು ಸಂಗತಿ ಬೆಳಕಿಗೆ ಬಂದಿದೆ ಆದ್ದರಿಂದ ಯಾವ ಗೋಡನ್ ನಿಂದ ಯಾವ ಅಂಗನವಾಡಿಯಿಂದ ಸರಬರಾಜು ಆಗಿದೆ ಎಂಬುದು ಅಧಿಕಾರಿಗಳು ಖಚಿತಪಡಿಸಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸಬೇಕು, ಮಕ್ಕಳಿಗೆ ನೀಡುವಂತಹ ಪುಷ್ಟಿ ಆಹಾರ ಅನಾಮದೇಯ ಗೋಡನ್ ಗಳಲ್ಲಿ ಚೀಲಗಟ್ಟಲೆ ಪತ್ತೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದು ವಿಷಾದನೀಯ, ಎಂದರು.
ಇದೇ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿಗಳಾದ ಶಿವಪ್ರಸಾದ್, ತಳಕು ಸಹಾಯಕ ಬೆಸ್ಕಾಂ ಅಧಿಕಾರಿ ಮಮತಾ , ಸಿ ಡಿ ಪಿ ಓ ರಾಜು ನಾಯಕ್ , ಆಹಾರ ನಿರೀಕ್ಷಕರಾದ ಹಾಗೂ ಗ್ಯಾರಂಟಿ ಸಮಿತಿ ಸದಸ್ಯರುಗಳು ಪಾಲ್ಗೊಂಡಿದ್ದರು .


