ಚಳ್ಳಕೆರೆ : ವೃಂದವನಹಳ್ಳಿ ಕುಟುಂಬದ ಜಮೀನು ರಿಜಿಸ್ಟರ್ ವಿಳಂಬವಾಗಲು ಅನಾಮಧೇಯ ದೂರವಾಣಿ ಕರೆಗಳ ಒತ್ತಡಕ್ಕೆ ಮಣಿದು ರಿಜಿಸ್ಟರ್ ವಿಳಂಭ ಮಾಡಿದ್ದಾರೆ ಎಂದು ಗೊಂದಲ ಸೃಷ್ಟಿಯಾಗಿದೆ. ಆದರೆ ಅಧಿಕಾರಿ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ವಿಳಂಭವಾಗಿಲ್ಲ ವೃಂದವನಹಳ್ಳಿ ಗ್ರಾಮದ ಸಾರ್ವಜನಿಕರು ಮನವಿ ನೀಡಿದ್ದರಿಂದ ಪರೀಶಿಲನೆ ಮಾಡಲು ಕೊಂಚ ಸಮಯ ತೆಗೆದುಕೊಂಡಿದೆ ವಿನಃ ಯಾವುದೇ ಒತ್ತಡಕ್ಕೂ ಮಣಿದು ರಿಜಿಸ್ಟರ್ ವಿಳಂಬ ಮಾಡಿಲ್ಲ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ಮಾಧ್ಯಮದೊಟ್ಟಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವೃಂದವನಹಳ್ಳಿ ಗ್ರಾಮದ
ಪಾರ್ವತಮ್ಮ ಇವರ ಸರ್ವೆ 49/2 ರಲ್ಲಿ 3 ಎಕರೆ ಜಮೀನು ಮಾರಾಟ ಮಾಡಲು ನಿಗದಿಯಾಗಿದ್ದ ದಿ.16 ಜನವರಿಯಂದೆ ರಿಜಿಸ್ಟರ್ ಮಾಡಲಾಗಿದೆ, ಈ ಜಮೀನಿಗೆ ಸಂಭಂದಿಸಿದಂತೆ ಕಡತಗಳಲ್ಲಿ ಯಾವುದೇ ತಕಾರರು ಇಲ್ಲ, ಅದರಂತೆ ಎಸ್ಸಿ ಪಿಟಿಸಿಎಲ್ ಕಾಯ್ದೆಗೆ ಒಳಪಡದೆ ಸಾಮಾನ್ಯ ವರ್ಗಕ್ಕೆ ಬರುವುದು ಹಾಗೂ 15 ವರ್ಷದ ಪರಬಾರೆ ಅವಕಾಶವೂ ಮುಗಿದಿರುವುದರಿಂದ ಯಾವುದೇ ತಕಾರರು ಇಲ್ಲವೆಂದು ಎನ್ ಓ ಸಿ ನೀಡಲಾಗಿದೆ. ಆದಾಗ್ಯೂ ಗ್ರಾಮಸ್ಥರು ಮೂಲ ದಾಖಲೆಗಳನ್ನು ಪರೀಶಿಲನೆ ಮಾಡಲು ಅರ್ಜಿ ನೀಡಿರುವುದರಿಂದ ನಿಯಮಾವಳಿಗಳ ಪ್ರಕಾರ ಪರಿಶೀಲನೆ ನಡೆಸಲು ಎರಡು ಪಾರ್ಟಿಗೆ ಸಮಯಾವಕಾಶ ಕೇಳಿ ನಂತರ ಪರೀಶಿಲನೆ ನಡೆಸಿ ಎಲ್ಲಾ ಮೂಲ ದಾಖಲು ನಿಯಮಗಳ ಪ್ರಕಾರ ಸರಿಯಿವೆ ಎಂದು ಗೊತ್ತುಪಡಿಸಿಕೊಂಡ ನಂತರವೇ ಸರಕಾರಿ ಸಮಯದಲ್ಲಿ ರಿಜಿಸ್ಟರ್ ಮಾಡಿದೆ ವಿನಃ ಅನ್ಯ ಕಾರಣ್ಣಕ್ಕೆ ಅಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಸಬ್ ರಿಜಿಸ್ಟರ್ ಚಂದ್ರಮ್ಮ ಮಾತನಾಡಿ, ನಿಗಧಿತ ಸಮಯಕ್ಕೆ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿ ಅವರಿಗೆ ಸ್ಲಾಟ್ ನೀಡಿ, ದಿನಾಂಕ ನೀಡಿತ್ತು ಅದರಂತೆ ಅವರು ಬಂದಿದ್ದರು, ಆದರೆ ಸ್ಲಾಟ್ ಪ್ರಕಾರ ಸಂಜೆ ವೇಳೆಗೆ ರಿಜಿಸ್ಟರ್ ಮಾಡಿದೆ ಆದರೆ ಈ ಮಧ್ಯೆ ಕೆಲವು ಗೊಂದಲ ಸೃಷ್ಟಿಸಿಕೊಂಡು ಸುಖಾಸುಮ್ಮನೆ ಆರೋಪಿಸಿದರು, ಆದರೆ ಮೂಲ ದಾಖಲೆ ಗಳ ಪ್ರಕಾರವೇ ರಿಜಿಸ್ಟರ್ ಮಾಡಿದೆ ಹೊರತು ಯಾರ ಒತ್ತಡಕ್ಕೂ ಮಣಿದಿಲ್ಲ ಯಾರೂ ಕೂಡ ದೂರವಾಣಿ ಕರೆ ಮಾಡಿಲ್ಲ ಎಂದರು.

