filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;

ಚಳ್ಳಕೆರೆ : ಆರೋಗ್ಯವೇ ಭಾಗ್ಯ ಎಂಬಂತೆ ಗ್ರಾಮೀಣ ಜನರ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಉತ್ತಮ ಸಂಗತಿಯಾಗಿದೆ ಎಂದು ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಯಾನಂದ ಪ್ರಹ್ಲಾದ್ ಹೇಳಿದರು.

ತಾಲೂಕಿನ ಮಧುರೆ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್,
ಜಿಲ್ಲಾ ಆಯುಷ್ ಇಲಾಖೆ,
ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ,
ಬಾಪೂಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗು ಆಸ್ಪತ್ರೆ,
ಹಾಗು ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ
ಇವರ ಸಹಯೋಗದೊಂದಿಗೆ
ಉಚಿತ ಆಯುರ್ವೇದ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಮಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು,

ಗ್ರಾಮೀಣ ಭಾಗದಲ್ಲಿ ನುರಿತ ವೈದ್ಯರ ತಂಡದೊಂದಿಗೆ ಜನರಿರುವ ಸ್ಥಳಗಳಲ್ಲಿಯೇ ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಆಯೋಜಿಸಿ, ಜನಸೇವೆ ನೀಡುತ್ತಿರುವುದು ಶ್ಲಾಘನೀಯ ಸೇವೆ. ಇಂತಹ ಶಿಬಿರದ ಸೇವೆಯ ಲಾಭಗಳನ್ನು ಸಾರ್ವಜನಿಕರು ಪಡೆಯಬೇಕು ಎಂದು ಹೇಳಿದರು.

ಡಾ.ನಾಗರಾಜ್ ಮಾತನಾಡಿ, ವೈದ್ಯರಿಂದ ನಡೆಯುವಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಗ್ರಾಮೀಣ ಜನಸಮುದಾಯಕ್ಕೆ ಪೂರಕವಾಗಿವೆ. ಇದರ ಸದುಪಯೋಗ ಪಡೆಯಲು ಎಲ್ಲರೂ ಮುಂದಾಗಬೇಕು , ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಗ್ರಾಮೀಣರಿಗೆ ವರದಾನವಾಗಿವೆ ಎಂದರು.

ಆಯುಷ್ಯ ಇಲಾಖೆಯ ಡಾ.ಉದಯ್ ಬಾಸ್ಕರ್ ಮಾತನಾಡಿ, ಹಲವು ವೈದ್ಯರ ತಂಡದೊಂದಿಗೆ ಗ್ರಾಮೀಣ ಭಾಗಗಳಲ್ಲಿ ಬಡವರಿಗೆ ದುರ್ಬಲರಿಗೆ ಶಿಬಿರಗಳ ಮೂಲಕ ಉಚಿತ ಔಷಧಿ ನೀಡಿ, ಆರೋಗ್ಯ ಸೇವೆ ಮಾಡುವುದು , ನಗರ ಪಟ್ಟಣದತ್ತ ಬರುವ ರೋಗಿಗಳ ಸಂಖ್ಯೆ ಕಡಿಯಾಗುತ್ತದೆ ಸ್ಥಳದಲ್ಲೆ ಗುಣಮುಖರಾಗುವುದು ಉತ್ತಮೆ ಬೆಳವಣಿಗೆ ಎಂದರು.

ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮಿ‌ಹೊನ್ನುರುಪ್ಪ , ಬಿಜೆಪಿ ಮಂಡಳ ಅಧ್ಯಕ್ಷ ಸುರೇಶ್, ಗ್ರಾಪಂ.ಸದಸ್ಯ ಶಿವಣ್ಣ, ಡಾ.ನಾಗರಾಜ್, ಡಾ.ಉದಯ್ ಬಾಸ್ಕರ್, ಪಿ‌‌ .ನಾಗರಾಜ್, ಡಾ.ಅರುಣ್ ಎನ್ ಪಿ., ಹೊಂಗಿರಣ ಶಾಲೆಯ ದಯಾನಂದ ಪ್ರಹ್ಲಾದ್, ಸಂಸ್ಥೆಯ ನಿರ್ದೇಶಕ
ಶಿವಪ್ರಸಾದ್, ಮಲ್ಲೇಶರಂ ಶಾಲೆಯ ಮುಖ್ಯ ಶಿಕ್ಷಕ ಆನಂದ ರೆಡ್ಡಿ, ಪ್ರಸಾದ್ ಡಿವಿಎನ್, ಬಾಪುಜಿ ವೈದ್ಯಕೀಯ ಡಾ.ಅರುಣ್, ಡಾ.ಕಲ್ಯಾಣ್ ,ಡಾ.ವೈಷ್ಟವಿ, ವೀರಭದ್ರ, ರೋಗಿಗಳು, ಶಾಲಾ ಮಕ್ಕಳು ಇತರರು ಇದ್ದರು.

ಪೋಟೋ : ಚಳ್ಳಕೆರೆ ತಾಲೂಕಿನ ಮಧುರೆ ಗ್ರಾಮದಲ್ಲಿ ಮಲ್ಲೇಶ್ವರಂ ಶಾಲಾ ಆವರಣದಲ್ಲಿ ಆಯುಷ್, ಬಾಪೂಜಿ ಆಯುರ್ವೇದಿಕ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳು.

About The Author

Namma Challakere Local News
error: Content is protected !!