ಚಳ್ಳಕೆರೆ : ತಾಲ್ಲೂಕಿನ ಬೆಳಗೆರೆ ಗ್ರಾಮದ ರಿ.ಸರ್ವೆ ನಂಬರ್ 142/1 ರಲ್ಲಿ ಕೊಲ್ಲಾಪುರದಮ್ಮ ದೇವಸ್ಥಾನ ಹಾಗೂ 50-60 ವರ್ಷಗಳಿಂದ ಕೃಷಿ ಕಾಯಕ ಮಾಡಿಕೊಂಡು ಬರುತ್ತಿರುವ ದಂಡ್ಡಜ್ಜರ್ ವಂಶಸ್ಥರ 20 ಕುಟುಂಬಗಳಿಗೆ ಕೃಷಿ ಜಮೀನಿಗೂ ಹೋಗುವ ದಾರಿ ಅನ್ಯರು ಅಡ್ಡಿ‌ ಪಡಿಸಿ ಜೆಸಿಬಿ ಯಂತ್ರದ ಮೂಲಕ ರಸ್ತೆಯನ್ನು ಗುಂಡಿ ಮಾಡಿ ಕೃಷಿ ಕೆಲಸದ ವಸ್ತುಗಳನ್ನು ಕೊಂಡೊಯ್ಯಲು ಇದೇ ಗ್ರಾಮದ ಕೊಲ್ಲಾಪುರದಮ್ಮ ದೇವಿ ಪೂಜಾರಿಗಳಿಗೆ ಪೂಜೆ ಕಾರ್ಯಕ್ಕೆ ಅಡ್ಡಿಯಾಗಿರುತ್ತದೆ. ತಾವು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೃಷಿ ಚಟುವಟಿಕೆಗೆ ಹಾಗೂ ದೇವಸ್ಥಾನ ಪೂಜೆಗೆ ಯಾವುದೇ ವಿಜ್ಞ ಬಾರದಂತೆ ರಸ್ತೆಯನ್ನು ಬಿಡಿಸಿಕೊಡುವಂತೆ ಬೆಳಗೆರೆ ಗ್ರಾಮದ ದೊಡ್ಡಜರ ವಂಶಸ್ಥರು ಇಂದು ತಹಶೀಲ್ದಾರ್ ರೆಹಾನ್ ಪಾಷಾ ಇವರಿಗೆ ಮನವಿಯನ್ನ ಸಲ್ಲಿಸಿದ್ದಾರೆ..

ಮನವಿ ಪತ್ರ ನೀಡಿ ಮಾತನಾಡಿದ ಬಿವಿ ಪ್ರಕಾಶ್ ನಾವು ನಮ್ಮ ತಾತನ ಕಾಲದಿಂದಲೂ ಇದೇ ರಸ್ತೆಯಲ್ಲಿ ನಮ್ಮ ಜಮೀನಿಗೆ ಸಂಚಾರ ಮಾಡುತ್ತಿದ್ದು ಯಾವುದೇ ಅಡೆಯಿಲ್ಲದೆ ಕೃಷಿ ಚಟುವಟಿಕೆ ಹಾಗೂ ಪೂಜಾ ಕಾರ್ಯ ಮಾಡುಕೊಂಡು ಬರುತ್ತಿದ್ದು ಆದರೆ ಈಗ ಮಂಜುಳಮ್ಮ ಏಕಾ ಏಕಿ ಜೆಸಿಬಿ ಯಂತ್ರದ ಮೂಲಕ ರಸ್ತೆಯನ್ನು ಗುಂಡಿ ಮಾಡಿ ಕೃಷಿ ಚಟುವಟಿಕೆ ಹಾಗೂ ಪೂಜೆಗೆ ಅಡ್ಡಿಪಡಿಸಿದ್ದಾರೆ .ನಮಗೆ ಈ ದಾರಿ ಬಿಟ್ಟರೆ ಜಮೀನಿಗೆ ಹಾಗೂ ದೇವಸ್ಥಾನಕ್ಕೆ ಬರುವ ಬೇರೆ ದಾರಿ ಇಲ್ಲ. ಆದ ಕಾರಣ ಕೃಷಿ ಚಟುವಟಿಕೆ ಹಾಗೂ ದೇವಿ ಪೂಜೆಗೆ ಯಾವುದೇ ಅಡ್ಡಿಯಾಗದಂತೆ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು..

ಈ ಸಮಯದಲ್ಲಿ ಡಿ.ಶಿವಾನಂದಪ್ಪ,ಕೃಷ್ಣಪ್ಪ,ರಾಮಣ್ಣ, ಎಸ್.ಮಹೇಶ,ಬಿವಿ.ಆನಂದಪ್ಪ,ಎಂ.ದಂಡಪ್ಪ,ಸಿ. ಪ್ರಭಾಕರ್, ಎಂ.ಶಿವರುದ್ರ ಸೇರಿದಂರೆ ರೈತರಿದ್ದರು.

About The Author

Namma Challakere Local News
error: Content is protected !!