ಚಳ್ಳಕೆರೆ : ಸದೃಢ ಸಮಾಜ ನಿರ್ಮಾಣಕ್ಕಾಗಿ ಮಕರ ಸಂಕ್ರಾಂತಿ ಪ್ರಯುಕ್ತ ನಮ್ಮ ಹಿಂದಿನ ಭಾರತೀಯ ಸಂಸ್ಕೃತಿಯನ್ನು ಮತ್ತೆ ಮರುಕಳಿಸುತ್ತಾ ಸಂಕ್ರಾಂತಿ ದಿನದಂದು ಯೋಗ ಶಿಕ್ಷಣ ಸಮಿತಿಯಿಂದ ಆಯೋಜಸಲಾಗಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಗುರುಗಳಾದ ಮನೋಹರ ಅಣ್ಣನವರು ಹೇಳಿದರು.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಆಯೋಜಿಸಿದ ನಮ್ಮ ಸಂಸ್ಕೃತಿ ನಮ್ಮ ಯೋಗ ವಾಕ್ಯದೊಂದಿಗೆ ಯೋಗ ಕುಟುಂಬದೊಂದಿಗೆ ಸುಮಾರು 150 ಯೋಗ ಪಾಟುಗಳೊಂದಿಗೆ ಸಂಕ್ರಾಂತಿ ಆಚರಿಸಿ, ನಶಿಸಿ ಹೋಗುತ್ತಿರುವಂತಹ ಭಾರತೀಯ ಸಂಸ್ಕೃತಿಯನ್ನು ಮತ್ತೆ ಮುನ್ನಲೆಗೆ ತರುವಂತಹ ಕಾರ್ಯ ಮಾಡಲಾಗಿದೆ ಎಂದರು.
ಅದರಂತೆ ಕಸ್ತೂರಬಾ ಗಾಂಧಿ ಶಾಲೆಯ ಮಕ್ಕಳು, ಬಾಪೂಜಿ ಆರ್ಯುವೇದ ಕಾಲೇಜು ವಿದ್ಯಾರ್ಥಿಗಳು, ಇತರರ 150 ಯೋಗಪಟುಗಳು ಭಾಗ ವಹಿಸಿದ್ದರು,
ಇದೇ ಸಂಧರ್ಭದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಗುರುಗಳಾದ ಮನೋಹರ್ ಅಣ್ಣಾ, ಶಿವನಾಗಪ್ಪ, ಆನಂದಣ್ಣ , ಪ್ರಮೋದಕ್ಕ, ಮಹೇಶ್, ಶಿವಣ್ಣ, ನಾಗರಾಜ್, ಇತರರು ಇದ್ದರು.

