ನಾಯಕನಹಟ್ಟಿ-:ಶಿಕ್ಷಕರು ವಿದ್ಯಾರ್ಥಿನಿಯರ ಬಗ್ಗೆ ಕಾಳಜಿ ಹೊಂದಿರಬೇಕು.ಮನೆಯಲ್ಲಿ ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳಿಗಾಗಿಯೇ ಸರ್ಕಾರದಿಂದ ವಿಶೇಷ ಸೌಲಭ್ಯಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದು ಎನ್ ಮಹದೇವಪುರ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಹೇಳಿದರು.
ಶುಕ್ರವಾರ ಸಮೀಪದ ಎನ್.ಮಹದೇವಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಬಿ.ತಿಪ್ಪೇಸ್ವಾಮಿ. ಮಾತನಾಡಿದರು.ಬಾಲ್ಯದಲ್ಲಿ ಮಕ್ಕಳು ತಮ್ಮ ಹಕ್ಕುಗಳ ಕುರಿತಾದ ಜ್ಞಾನದಿಂದ ವಂಚಿತರಾದರೆ, ಭವಿಷ್ಯದಲ್ಲಿ ಅವರಿಗೆ ಲಭಿಸಬಹುದಾದ ಪ್ರಯೋಜನಗಳಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ, ಮನೆಯಲ್ಲಿರುವ ಹಿರಿಯರು ಮತ್ತು ಸಮಾಜದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ತಮ್ಮ ಪಾಲಿನ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸಬೇಕಿದೆ. ಆ ಮೂಲಕ ಮಕ್ಕಳ ವರ್ತಮಾನ ಮತ್ತು ಭವಿಷ್ಯ ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು.
ಪ್ರಾಸ್ತವಿಕವಾಗಿ ಪಿಡಿಒ ಎಂ.ಎಚ್. ಗಿರೀಶ್ ಮಾತನಾಡಿದರು.ಗ್ರಾಮ ಸಭೆಯಲ್ಲಿ ಮಹಿಳೆಯರ ಸಮಸ್ಯೆ ಪರಿಹಾರಿಸಲಾಗುವುದು. ಮಹಿಳಾ ಸಂಘಗಳು ಕೇವಲ ಉಳಿತಾಯ ಸಂಘಗಳಾಗದೆ ಸ್ವಯಂ ಉದ್ಯೋಗ ಸಂಘಗಳಾಗಿ ಬೆಳೆಯಬೇಕು. ಸರ್ಕಾರದಿಂದಸಿಗುವ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣ ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಂಡರ್ ಸ್ಪೆಷಲಿಸ್ಟ್ ಡಿ. ಗೀತಾ ಮಾತನಾಡಿ,ಪ್ರೌಢಶಾಲೆಯಲ್ಲಿ ಹದಿಹರೆಯದ ಮಕ್ಕಳಿದ್ದು, ಶಿಕ್ಷಕರು ಅವರಿಗೆ ಪೋಕ್ಸೊ ಬಗ್ಗೆ ತಿಳಿಸಬೇಕು. ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳ ವ್ಯಾಸಂಗ ಕುಂಠಿತವಾಗುತ್ತಿದೆ. ದೃಶ್ಯ ಮಾಧ್ಯಮಗಳು ದೃಶ್ಯಗಳನ್ನು ವೈಭವೀಕರಿಸದಂತೆ ತಡೆಯಲು ಕಟ್ಟುನಿಟ್ಟಿನ ಕಾನೂನು ಬರಬೇಕಿದೆ ಎಂದರು.
ಮತ್ತು ಡಿ.ಸಿ.ಪಿ.ಯು. ಶ್ರೀಮತಿ ರೇಖಾ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಜಯಲಕ್ಷ್ಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಾಯಕನಹಟ್ಟಿ- ಪೊಲೀಸ್ ಠಾಣೆ ಪಿಎಸ್ಐ ಜಿ. ಪಾಂಡುರಂಗಪ್ಪ, ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ. ಬೋರನಾಯಕ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀ ಮತಿ ಸೈಯದ್ ಅಖ್ತರ್ ಬಾನು, ಸದಸ್ಯರಾದ ಎಂ. ಪಾಲಯ್ಯ,
ಎಂ. ಓಬಳೇಶಪ್ಪ, ಗೋಮ್ಲಿಬಾಯಿ,ಹಾಗೂ ಡಿಸಿಪಿಯು ಚಿತ್ರದುರ್ಗ ಶ್ರೀಮತಿ ರೇಖಾ,
ಸಿ ಆರ್ ಪಿ ಸಿ.ಹನುಮಂತಪ್ಪ, ತಾಲೂಕು ವ್ಯವಸ್ಥಾಪಕರು ಎನ್ ಆರ್ ಎಲ್ ಎಂ. ತಿಪ್ಪೇಸ್ವಾಮಿ, ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ನಿರೀಕ್ಷಣಾಧಿಕಾರಿ ಎ.ರಮೇಶ್, ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಬಿ ಎಂ ತಿಪ್ಪೇಸ್ವಾಮಿ ಸಹ ಶಿಕ್ಷಕ ಸಿದ್ದಪ್ಪ ನೀಲವಂಜಿ, ರಾಜ ನಾಯ್ಕ, ಶಿಕ್ಷಕಿರಾದ ಪಾರ್ವತಿ, ಶಾಂತಮ್ಮ, ಕಾವ್ಯ ,ವಿಜಯಮ್ಮ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಗಣಕಯಂತ್ರ ನಿರ್ವಾಹಕ ಜಿ ತಿಪ್ಪೇರುದ್ರಪ್ಪ, ಬಿಲ್ ಕಲೆಕ್ಟರ್ ಎಸ್ ಯೋಗೇಂದ್ರ, ಆರ್. ರಾಜೇಶ್, ಸೇರಿದಂತೆ ಗ್ರಾಮಸ್ಥರು ವಿದ್ಯಾರ್ಥಿ -ವಿದ್ಯಾರ್ಥಿನಿಯರು ಇದ್ದರು

