ಚಳ್ಳಕೆರೆ :
ಸರಕಾರಿ ನೌಕರರ ವತಿಯಿಂದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 34 ಇಲಾಖೆಗಳ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಲೀಗ್ ಮಾದರಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ
ಹೌದು.
ದಿನಾಂಕ 11-01-2026, ಬೆಳಿಗ್ಗೆ 9:30 ಗಂಟೆಗೆ ನಗರದ ಎಸ್ಪಿಸಿಸಿ ಕಾಲೇಜಿನ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ.
ಈ ಟೂರ್ನಮೆಂಟ್‌ನಲ್ಲಿ ಚಳ್ಳಕೆರೆ ತಾಲೂಕಿನ ವಿವಿಧ ಇಲಾಖೆಗಳ ಸರಕಾರಿ ನೌಕರರು ಭಾಗವಹಿಸಲಿದ್ದು, ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ ಎಂದು ನೌಕರ ಸಂಘದ ಅಧ್ಯಕ್ಷ ಸಿಟಿ ವೀರೇಶ್ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಸಾಮಾನ್ಯ ನೌಕರರು ದಿನನಿತ್ಯದ ಕೆಲಸದ ಒತ್ತಡದಿಂದ ದೈಹಿಕ ವ್ಯಾಯಾಮದಿಂದ ದೂರವಾಗುತ್ತಿರುವ ಹಿನ್ನೆಲೆಯಲ್ಲಿ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಕ್ರೀಡಾ ಚಟುವಟಿಕೆ ಅಗತ್ಯವೆಂದು ಅವರು ಹೇಳಿದರು.
ನೌಕರರು ಒತ್ತಡದಿಂದ ದೂರವಿದ್ದು ಆರೋಗ್ಯವಂತರಾಗಲು ಈ ಕ್ರಿಕೆಟ್ ಟೂರ್ನಮೆಂಟ್ ಸಹಕಾರಿಯಾಗಲಿದೆ ಎಂದು ತಿಳಿಸಿದರು.

