ಚಳ್ಳಕೆರೆ :

ತಾಲೂಕಿನ
ಘಟಪರ್ತಿ ಕ್ಲಸ್ಟರ್ ಮಟ್ಟದ ಕ್ಲಸ್ಟರ್ ಕಲಿಕಾ ಹಬ್ಬ ಹಾಗೂ LKG ತರಗತಿ ಪ್ರಾರಂಬೊತ್ಸವ..

ತಾಲೂಕಿನ ಘಟಪರ್ತಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿ ಆರ್ ಪಿ ಶಿವಣ್ಣ ಮಾತನಾಡಿ ಎಫ್ ಎಲ್ ಏನ್ ಕಲಿಕಾ ಹಬ್ಬವು ಮಕ್ಕಳಲ್ಲಿರುವ ಬುನಾದಿ ಭಾಷಾ ಸಾಮರ್ಥ್ಯ ಹಾಗೂ ಗಣಿತದ ಜ್ಞಾನ ಮತ್ತು ಪೋಷಕರೊಂದಿಗೆ ಇರುವ ಸಹ ಸಂಬಂಧವನ್ನು ಗುರುತಿಸುವ ಹಾಗೂ ವಿಶಿಷ್ಟ ಕಲೆಗಳನ್ನು ಮಕ್ಕಳು ತಮ್ಮ ಸುತ್ತ ಪ್ರತಿಭೆಗಳನ್ನು ಹೊರ ಹಾಕಲು ಇಂತಹ ವೇದಿಕೆಗಳು ಸಹಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಎಸ್‌ಡಿಎಂಸಿ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ,
ಶಾಲೆಗೆ ಎಲ್ ಕೆ ಜಿ ತರಗತಿ ಪ್ರಾರಂಭವಾಗಿರುವುದು ಅತ್ಯಂತ ಸಂತೋಷದ ವಿಷಯ ಆದ್ದರಿಂದ ಮಕ್ಕಳು ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಭಾಷಾ ಮಾಧ್ಯಮದಲ್ಲಿ ಉತ್ತಮ ವ್ಯಾಸಂಗ ಮಾಡಲು ಅನುಕೂಲವಾಗುತ್ತದೆ ಹಾಗೂ ಸರ್ಕಾರಿ ಶಾಲೆಗಳ ದಾಖಲಾತಿ ಸಬಲಿಕರಣಕ್ಕಾಗಿ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಬಸವರಾಜ್, ಹನುಮಂತರೆಡ್ಡಿ, ಸತ್ಯ, ಶಿಕ್ಷಕರಾದ ಪ್ರತಿಭಾ, ಅಖಿಲ, ಲಾವಣ್ಯ, ಸ್ವಾತಿ, ಪ್ರಹ್ಲಾದ,ಯಲ್ಲಪ್ಪ ಫೌಜಿಯ ಬೇಗ0, ಸೋಮಶೇಖರ ತಿಪ್ಪೇಸ್ವಾಮಿ, ಮತ್ತಿತರರು ಹಾಜರಿದ್ದರು

About The Author

Namma Challakere Local News
error: Content is protected !!