ಚಳ್ಳಕೆರೆ :
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಕಿಡಿಗೇಡಿಗಳ ಅಟ್ಟಹಾಸದಿಂದ ಅಲ್ಲಿಯ ನಗರ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದೇಗೆಟ್ಟಿದೆ ಎಂಬುದಕ್ಕೆ ದಿನಾಂಕ 30.12.2025 ರಂದು ಸರಿಸುಮಾರು ಸಂಜೆ 4:30 ರಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸು ಪಕ್ಕದಲ್ಲಿ ಇರುವಂತಹ ಮೊಬೈಲ್ ಅಂಗಡಿಗೆ ರಿಪೇರಿ ಮಾಡುವ ನೆಪದಲ್ಲಿ ಹೋಗಿ ಉದ್ದೇಶಪೂರ್ವಕವಾಗಿ ಮನಸೋ ಇಚ್ಛೆ ಮಾರಣಾಂತಿಕವಾಗಿ ಹಲ್ಲೇ ಮಾಡಿರುವುದು ಗಮನಿಸಿದರೆ ನಗರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದು ಈ ಘಟನೆಯ ಮೂಲಕ ಗಮನಿಸಬಹುದು.
ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಭ್ರಷ್ಟಾಚಾರದ ವಿರುದ್ಧ ಹಾಗೂ ಅನ್ಯದ ವಿರುದ್ಧ ಹೋರಾಡುತ್ತಿರುವುದನ್ನು ಸಹಿಸಲಾರದೆ ತಾಲೂಕಿನಲ್ಲಿ ಇತ್ತೀಚೆಗೆ ನಗರಸಭೆ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದಂತಹ ತಾಲೂಕಿನ ಅಧ್ಯಕ್ಷ ವಿನಯ ರವರ ಕೆಲಸಗಳನ್ನ ಸಹಿಸಲಾರದೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿರುವುದು ಹಾಗೂ ಮಾಡಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಹಿರಿಯೂರು ತಾಲೂಕಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿಯಾದ ಡಿ ಸುಧಾಕರ್ ರವರ ಹೆಸರುನ್ನು ಈ ಕಿಡಿಗೇಡಿಗಳು ಬಳಸಿಕೊಂಡು ಈ ರೀತಿಯ ದೌರ್ಜನ್ಯ ಅಕ್ರಮಗಳನ್ನು ಮಾಡುತ್ತಿರುವುದು ಎಂದು ಅಲ್ಲಿಯ ಸ್ಥಳೀಯ ಜನರು ಮತ್ತು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ರೀತಿ ಸುಳ್ಳು ಪ್ರಕರಣಗಳನ್ನು ದಾಖಲಿಸುವ ರವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮತ್ತು ಇಂತಹ ಘಟನೆಗಳನ್ನು ಮರುಕಳಿಸಿದಂತೆ ಹಿರಿಯೂರು ತಾಲೂಕಿನಲ್ಲಿ ಕಾನೂನು ವ್ಯವಸ್ಥೆ ಕಾಪಾಡಿ, ವಿನಯ ರವರಿಗೆ ನ್ಯಾಯ ಕೊಡಿಸಬೇಕು ಎಂದು
ಕರ್ನಾಟಕ ರಾಜ್ಯ ಸಮಿತಿ ಪಕ್ಷದ ರಾಜ್ಯ ಎಸ್ಸಿ ಎಸ್ಟಿ ರಾಜ್ಯ ಕಾರ್ಯದರ್ಶಿ ಮಾರುತಿ ಮತ್ತು ಕಾರ್ಯನಿರ್ವಕ ಸಮಿತಿ ಸದಸ್ಯರಾದ ಮಹೇಶ್ ನಗರಂಗೆರೆ ಅವರ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಚಿತ್ರದುರ್ಗ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಇವರುಗಳಿಗೆ ಕೆಆರ್ ಎಸ್ ಪಕ್ಷ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ವೀರಭದ್ರಪ್ಪ, ಚಳ್ಳಕೆರೆ ತಾಲ್ಲೂಕು ಉಪಾಧ್ಯಕ್ಷ ಜಬಿವುಲ್ಲಾ , ಹೊಳಲ್ಕೆರೆ ಉಪಾಧ್ಯಕ್ಷೆ ದೇವಿಕಾ, ಪುಟ್ಟಮ್ಮ ಲುಂಕೇಶ್, ತಿಪ್ಪೇಸ್ವಾಮಿ, ಕೆಂಚಪ್ಪ , ನಾಗರಾಜ ಶಂಕರಪ್ಪ ಎಸ್ಸಿ ಎಸ್ಟಿ ಪದಾಧಿಕಾರಿಗಳು ಮತ್ತು ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

