“ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಗೋಪೂಜೆ”.
ಚಳ್ಳಕೆರೆ:-ನಗರದ ಹೊರವಲಯದ ಅಜ್ಜನಗುಡಿ ಸಮೀಪದಲ್ಲಿರುವ ನನ್ನಿವಾಳದ ಕಟ್ಟೆಮನೆಗೆ ಸೇರಿದ ದೇವರ ಎತ್ತುಗಳಿಗೆ ವೈಕುಂಠ ಏಕಾದಶಿಯನ್ನು ಗಾಂಧಿನಗರದ ಶ್ರೀಸಾಯಿಬಾಬಾ ಮಂದಿರದ ಸದ್ಭಕ್ತರು ವಿಶೇಷ ಗೋಪೂಜೆ ನೆರವೇರಿಸಿ ಅವುಗಳಿಗೆ ಅಕ್ಕಿ-ಬೆಲ್ಲ,ಬಾಳೆಹಣ್ಣು, ತರಕಾರಿ ಹಾಗೂ ಸಿಹಿ ವಿತರಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಗೋಪಾಲಕ ಸಿದ್ದೇಶ್ ಅವರು ದೇವರ ಎತ್ತುಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ, ರತ್ನಮ್ಮ,ಮಧುಮತಿ, ಜ್ಯೋತಿ,ಗೀತಾ ಕಿರಣ, ಪುಟ್ಟಣ್ಣ,ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ,ಕಿಲಾರಿ ಪಾಲಯ್ಯ,ಓಬಣ್ಣ, ಪಾಲೆಪಾಪಯ್ಯ, ಸಾತ್ವಿಕ್,ಪೆದ್ದ ತಮ್ಮಯ್ಯ,ಗಿಡ್ಡ ಓಬಯ್ಯ,ಚಿನ್ನಯ್ಯ, ಚಾಟಿ ಓಬಯ್ಯ ಉಪಸ್ಥಿತರಿದ್ದರು.

