ಚಳ್ಳಕೆರೆ : ನಗರದಲ್ಲಿ ಜನಪರ ಹೋರಾಟಗಾರರ, ಸಂಘ-ಸಂಸ್ಥೆಗಳ ಹೋರಾಟಗಳನ್ನು ಹತ್ತಿಕ್ಕುವ ಸಲುವಾಗಿ ಸಾರ್ವಜನಿಕರಿಗೆ ತೊಂದರೆ ಎಂಬ ನೆಪವೊಡ್ಡಿ ಸರ್ಕಾರಿ ಕಛೇರಿಗಳ ಮುಂದೆ, ಸಾರ್ವಜನಿಕ ಸ್ಥಳಗಳಲ್ಲಿ
ಹೋರಾಟಗಳನ್ನು, ಧರಣಿ ಸತ್ಯಾಗ್ರಹಗಳನ್ನು ಮಾಡಬಾರದೆಂದು ಹೋರಾಟಗಾರರನ್ನು ಹತ್ತಿಕ್ಕುವ ಸಲುವಾಗಿ ಬೆರೆಲ್ಲೋ
ಜನರ ಗಮನ ಸೆಳೆಯದ ಕಡೆ ಸ್ಥಳ ನಿಗಧಿಮಾಡಿರುವುದು ಖಂಡನೀಯ ಸಂಗತಿ ಎಂದು ಸ್ಥಳೀಯ ಜನಪರ ಹೋರಾಟಗಾರರು ಹಾಗೂ ಸಾರ್ವಜನಿಕರು ತಾಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು..
ಆಡಳಿತ ವ್ಯವಸ್ಥೆಯ ಮತ್ತು ಜನಪ್ರತಿನಿಧಿಗಳ ಧೋರಣೆಯನ್ನು ಮರೆಮಾಚುವ ಸಲುವಾಗಿ ಈ ವ್ಯವಸ್ಥೆಯನ್ನು
ನಿರ್ಮಾಣ ಮಾಡಿರಬಹುದು ಎಂಬ ಭಾವನೆ ಜನರಲ್ಲಿ ಮೂಡಿದೆ. ಧರಣಿ ಸತ್ಯಾಗ್ರಹಗಳನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ
ಜನರ ಗಮನ ಸೆಳೆಯಲು ಜನರ ಮಧ್ಯದಲ್ಲೇ ಹೋರಾಟಗಳನ್ನು ಮಾಡಿಕೊಂಡು ಬರಲಾಗಿದೆ.
ಇಂತಹ ಸಂಪ್ರದಾಯವನ್ನು
ಯಾವ್ಯಾವುದೋ ಕಾರಣ ನೀಡಿ ಹತ್ತಿಕ್ಕುವ ಪ್ರಯತ್ನ ಸರಿಯಲ್ಲ ಹಾಗಾಗಿ ತಾವುಗಳು ಈ ಕೂಡಲೇ ಇಂತಹ ವ್ಯವಸ್ಥೆಯನ್ನು
ಕೈ ಬೀಡಬೇಕು, ಧರಣಿ ಸತ್ಯಾಗ್ರಹಕ್ಕೆ ಸ್ಥಳ ನಿಗಧಿ ಮಾಡಿರುವುದು ಪ್ರಜಾಪ್ರಭುತ್ವದ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಕಳಂಕವಾಗುತ್ತದೆ.
ಇಂತಹ ಕಾರ್ಯವನ್ನು ಕೂಡಲೇ ಕೈ ಬಿಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ
ಮಾಡಲಾಗುವುದೆಂದು ತಿಳಿಸುತ್ತಾ ನಿಮ್ಮ ಮೂಲಕ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಎಂದರು.
ಇದೇ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ರಾಜಣ್ಣ, ಹಿರೇಹಳ್ಳಿ ಎರ್ರಿಸ್ವಾಮಿ, ಚನ್ನಕೇಶವ, ಕೆಬಿ.ಪಾಲಣ್ಣ, ಕೃಷ್ಣೇಗೌಡ, ಮಹೇಶ್, ಮುರುಳಿ, ತಿಪ್ಪೇಸ್ವಾಮಿ, ಮಾರುತಿ ಇತರರ ಹಲವಾರು ಮುಖಂಡರು ಇದ್ದರು.

