ಚಳ್ಳಕೆರೆ : ಭಾರತದ ಮಾಜಿ ಪ್ರಧಾನಮಂತ್ರಿ, ಶ್ರೇಷ್ಠ ವಾಗ್ಮಿ, ಕವಿ, ಬಿಜೆಪಿ ನೇತಾರ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಳ್ಳಕೆರೆ ಬಿಜೆಪಿ ಮಂಡಲದವತಿಯಿಂದ ರೋಗಿಗಳಿಗೆ ಬ್ರೆಡ್, ಹಣ್ಣು ವಿತರಿಸಿ ಶುಭಾಶಯ ಕೋರಿದ್ದಾರೆ.
ಇನ್ನೂ ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಮಾತನಾಡಿ, ವಾಜಪೇಯಿ ಹುಟ್ಟುಹಬ್ಬವನ್ನು ಸರ್ಕಾರ ಉತ್ತಮ ಆಡಳಿತ ದಿನ (ಗುಡ್ ಗವರ್ನನ್ಸ್ ಡೇ) ಎಂದು ಆಚರಿಸುತ್ತಾ ಬಂದಿದೆ.
ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದ ವಾಜಪೇಯಿ ಮಧ್ಯ ಪ್ರದೇಶದ ಗ್ವಾಲಿಯರ ಹತ್ತಿರದ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದಲ್ಲಿ 1924ರ ಡಿಸೆಂಬರ್ 25ರಂದು ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಜನಿಸಿದರು.
ದೇಶದ ಅಭಿವೃದ್ಧಿಗೆ ವಾಜಪೇಯಿ ನೀಡಿದ ಕೊಡುಗೆಯನ್ನು ಸ್ಮರಿಸಲು 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲು ನಿರ್ಧರಿಸಿತ್ತು. ಅಂದಿನಿಂದ ಪ್ರತಿ ವರ್ಷ ಡಿಸೆಂಬರ್ 25 ಅನ್ನು ‘ಉತ್ತಮ ಆಡಳಿತ ದಿನ’ವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಇದೇ ಸಂಧರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಸುರೇಶ್, ದಿನೇಶ್ ರೆಡ್ಡಿ,
ಚಿದಾನಂದ, ವೀರಭದ್ರಪ್ಪ, ರಾಮಾಂಜನೇಯ, ನಾಗರಾಜ್ ಶೆಟ್ಟಿ, ಕಾಂತರಾಜ್, ದಿನೇಶ್ ರೆಡ್ಡಿ, ಡಾ.ರಾಮ್ ರಾಜ್, ಕೃಷ್ಣಪ್ಪ ,ರುದ್ರಮುನಿ, ಬಾಬು ಚನ್ನಗಾನಹಳ್ಳಿ, ದುರ್ಗಾವರ ರಂಗಸ್ವಾಮಿ, ಸಹನಾ, ಅಂಬಿಕಾ ಜಗದಾಂಬ, ಶಾಂತಮ್ಮ, ಭಾಗ್ಯಮ್ಮ, ತಿಮ್ಮಕ್ಕ, ಶಿವ ಅನ್ನಪೂರ್ಣ ,ಲಕ್ಷ್ಮೀ ಇನ್ನಿತರರು ಪಾಲ್ಗೊಂಡಿದ್ದರು


