ಚಳ್ಳಕೆರೆ : ಲೋಕೋಪಯೋಗಿ ಕಳಪೆ ಕಾಮಗಾರಿ ಯಿಂದ ವಾಹನ ಸವಾರರು ಸಾವಿನ ಮನೆ ಸೇರುವಂತಾಗಿದೆ
ಪ್ರತಿ ನಿತ್ಯವೂ ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಾಗುವಂತೆ ಹಾಗಿದೆ, ರಸ್ತೆಗಳ ಮೇಲೆ ಗುಂಡಿಗಳ ಮಹಾಪೂರವೇ ಇರುವುದರಿಂದ ಬೈಕ್ ಸವಾರರು ಬಿದ್ದು ಸಾವನ್ನಪ್ಪಿರುವ ನಿದರ್ಶನಗಳು ಇವೆ, ಆದರು ಗುಂಡಿ ಮುಚ್ಚುವ ಕಾರ್ಯ ಮಾತ್ರ ಲೋಕೋಪಯೋಗಿ ಇಲಾಖೆ ಮಾಡದೆ ಕಣ್ ಮುಚ್ಚಿ ಕೂತಿದೆ ಎಂದು ರೈತರು ಹೋರಾಟಗಾರರು ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ ಆದರೇ ಅದು ಯಾವುದಕ್ಕೂ ಕ್ಯಾರೆ ಎನ್ನದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಕಂಡು ಬಂದಿದೆ..
ಅದೇ ರೀತಿಯಲ್ಲಿ ಪಿ.ಗೌರಿಪುರದ ಸೇತುವೆ ಕಳಪೆ ಡಾಂಬರಿಕರಣದಿಂದ ಗುಂಡಿಗಳು ಬಿದ್ದಿವೆ ಇವುಗಳನ್ನು ಮುಚ್ಚುವ ಕೆಲಸವಾಗಲಿ, ವಾಹನ ಸವಾರರು ಪ್ರಾಣ ರಕ್ಷಣೆ ಬದ್ದರಾಗಿ ಎಂದು ಮನವಿ ಸಲ್ಲಿಸಿದರು.
ಆದ್ದರಿಂದ ಹೋರಾಟಗಾರರಾದ ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಯಾದಲಗಟ್ಟೆ ಜಗನ್ನಾಥ, ರುದ್ರಮುನಿಯಪ್ಪ, ಆರ್.ಎ.ದಯಾನಂದ ಮೂರ್ತಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

