filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;

ಚಳ್ಳಕೆರೆ : ಜನವಸತಿ ಪ್ರದೇಶದಲ್ಲಿ ಮೈನಿಂಗ್ ಡಂಪಿಂಗ್ ಯಾರ್ಡ ಮಾಡಿರುವುದರಿಂದ ಸಾರ್ವಜನಿಕರ ಮೇಳೆ , ಶಾಲಾ ಕಾಲೇಜು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ, ಆದ್ದರಿಂದ ಕೂಡಲೇ ನಿರ್ಜನ ಪ್ರದೇಶಕ್ಕೆ ಮೈನಿಂಗ್ ಡಂಪಿಗ್ ಯಾರ್ಡ ಸ್ಥಳಾಂತರ ಮಾಡಬೇಕು ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ನಗರದ ರೈಲ್ವೆ ಸ್ಟೇಷನ್ ನಿಲ್ದಾಣ ಬಳಿ ಇರುವ ಮೈನಿಂಗ್ ಡಂಪಿಂಗ್ ಯಾರ್ಡ್ ಸ್ಥಳದಲ್ಲಿ ಮೈನಿಂಗ್ ಡಂಪಿಂಗ್ ಮಾಡಕೂಡದು ಈ ಕೂಡಲೇ ನಿಲ್ಲಿಸಿ ಸ್ಥಳಾಂತರ ಮಾಡಬೇಕು ತಾಲೂಕು ಆಡಳಿತ, ಜಿಲ್ಲಾ ಆಡಳಿತ ಕೂಡಲೇ ಸಾರ್ವಜನಿಕರ ಪ್ರಾಣ ರಕ್ಷಣೆಗೆ ಮುಂದಾಗಬೇಕು.

ಕೂಗಳತೆಯ ದೂರದಲ್ಲಿ ಇರುವಂತಹ ಮದಕರಿನಗರ, ಇಂಜನಹಟ್ಟಿ ಹಾಗೂ ಪಕ್ಕದಲ್ಲಿರುವ ಖಾಸಗಿ ಕಾಲೇಜು, ಕಲ್ಯಾಣ ಮಂಟಪ ಹಾಗೂ ಜನವಸತಿ ಪ್ರದೇಶದ ಈ ಸ್ಥಳದಲ್ಲಿ ಮೈನಿಂಗ್ ಡಬ್ಬಿಂಗ್ ಮಾಡುವುದರಿಂದ ಧೂಳಿನ ಕಣಗಳು ಮಾನವನ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಅಸ್ತಮ, ಕೆಮ್ಮು , ಕಫದಂತಹ ಹಾನಿಕಾರಕ ರೋಗಗಳು ಉಂಟಾಗಿ ಆಸ್ಪತ್ರೆ ಸೇರುವಂಥ ದುಸ್ತುತಿ ಬಂದೊದಗಿದೆ ಆದ್ದರಿಂದ ಈ ಕೂಡಲೇ ಮೈನಿಂಗ್ ಡಂಪಿಂಗ್ ಯಾರ್ಡ್ ನ್ನು ಸ್ಥಳಾಂತರಿಸಿಗೊಳಿಸಬೇಕು

ಕೇವಲ ನೆಪ ಮಾತ್ರಕ್ಕೆ ರೈಲ್ವೆ ಸ್ಟೇಷನ್ ನಿಲ್ದಾಣ ಮುಂಬಾಗದಲ್ಲಿ ಇದ್ದ ಡಂಪಿಗ್ ಯಾರ್ಡ್ ನ್ನು ಕೆಲ ಪ್ರತಿಭಟನೆಗಳು ಮಾಡಿದ ನಂತರ ರೈಲ್ವೆ ಸ್ಟೇಷನ್ ನಿಲ್ದಾಣ ಹಿಂಬಾಗಕ್ಕೆ ಶಿಪ್ಟ್ ಮಾಡದಿರುವುದರಿಂದ ಸಾರ್ವಜನಿಕರಿಗೆ ಇನ್ನೂ ಅತೀ ಹೆಚ್ಚಿನ ತೊಂದರೆ ಹಾಗುತ್ತಿದೆ.

ಮೈನಿಂಗ್ ಡಂಪಿಂಗ್ ಮಾಡುವುದರಿಂದ ಮೈನಿಂಗ್ ಕೆಂಪು ಮಿಶ್ರಿತ ಧೂಳಿನ ಕಣಗಳು ನಗರಕ್ಕೆ ಹಬ್ಬಿ ಮಾರಕ ಕಾಯಿಲೆ ಸಾರ್ವಜನಿಕರ ಬಲಿಯಾಗಬೇಕಿದೆ.

ಇನ್ನೂ ಪಕ್ಕದಲ್ಲಿ ಹಾದು ಹೋದ ರಾಜಕಾಲುವೆ ಒತ್ತುವರಿ ಮಾಡಿ ಮೈನಿಂಗ್ ಲಾರಿಗಳ ಒಡಾಟ ಮಾಡಿರುವುದು ಕಂಡುಬಂದಿದೆ, ಈಗೇ ನಿಮ್ಮ ಮೈನಿಂಗ್ ಲೋಡಿಂಗ್ ಆನ್ ಲೋಡಿಂಗ್ ಮಾಡಿಕೊಳ್ಳು ನಿರ್ಜನ ಪ್ರದೇಶದ ಜನರಹಿತ ಪ್ರದೇಶದಲ್ಲಿ ಮಾಡಿಕೊಳ್ಳಿ ಒಂದು ಕಂಪನಿಯ ಉಳಿವಿಗೆ ಲಕ್ಷಾಂತರ ಜನರ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ..
ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಮೈನಿಂಗ್ ಲೋಡಿಂಗ್ ಮಾಡುವುದನ್ನು ತಪ್ಪಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ..

About The Author

Namma Challakere Local News
error: Content is protected !!