filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ಚಳ್ಳಕೆರೆ : ತೊಗರಿ ಬೆಳೆ ಬೆಳೆದ ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ, ಸರಕಾರದ ಪರಿಹಾರವೂ ಇಲ್ಲದೆ, ಇತ್ತ ಬೆಳೆವಿಮೆ ಇಲ್ಲದೆ ರೈತ ಸಾವಿನದವಡೆಯಲ್ಲಿದ್ದಾನೆ ಆದ್ದರಿಂದ ಸರಕಾರಗಳು ರೈತನ ನೆರವಿಗೆ ದಾವಿಸಬೇಕು ಎಂದು ರೈತ ಮುಖಂಡ ಹಾಗೂ ನಿವೃತ್ತ ಪ್ರಾ.ಡಾ.ಶಿವಲಿಂಪ್ಪ ಹೇಳಿದರು.

ಅವರು ತಾಲೂಕಿನ ಕಾಪರಹಳ್ಳಿ ಗ್ರಾಮದ ರೈತ ತಿಪ್ಪೇಸ್ವಾಮಿ ಎಂಬುವರ ಜಮೀನಿನ ಸರ್ವೆ ನಂಬರ್ 6/ 4 ರಲ್ಲಿ ಸುಮಾರು ಮೂರು ಎಕರೆ ತೊಗರಿ ಬೆಳೆ ಹೊಂದಿರುವ ಹೊಲದಲ್ಲಿ ಅಧಿಕಾರಿಗಳೊಂದಿಗೆ ಬೆಳೆ ಕಟಾವು ಸಮೀಕ್ಷೆ ನಡೆಸಿ ಮಾತನಾಡಿದರು.
ಅಧಿಕಾರಿಗಳು ಬೆಳೆವಿಮೆ ಕಂಪನಿಯ ಸಿಬ್ಬಂದಿ ಪಾರದರ್ಶಕವಾಗಿ ರೈತರು ಬಿತ್ತಿದ ಬೆಳೆಗಳಿಗೆ ಸಮೀಕ್ಷೆ ನಡೆಸಿ ರೈತನ ನೆರವಿಗೆ ಧಾವಿಸಬೇಕು.

ಇಡೀ ಚಳಕೆರೆ ತಾಲೂಕಿನಲ್ಲಿ ಸುಮಾರು 3314 ರೈತರು ತೊಗರಿ ಬೆಳೆಗೆ ವಿಮೆಯನ್ನು ನೊಂದಾಯಿಸಿಕೊಂಡಿದ್ದಾರೆ ಈ ಎಲ್ಲಾ ರೈತರಿಗೆ ಪಾರದರ್ಶಕವಾಗಿ ತೊಗರಿ ಬೆಳೆಗೆ ವಿಮಾ ಕಂಪನಿಯಿಂದ ಬರಬೇಕಾದ ಮೊತ್ತ ಸುಮಾರು 26 ಕೋಟಿ ರೂಪಾಯಿಗಳು,ಬೆಳೆ ಕಟಾವು ಸಮೀಕ್ಷೆಯಲ್ಲಿ ತೊಡಗಿದಂತಹ ಕೃಷಿ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಸಿಬ್ಬಂದಿಗಳು ತಾಲೂಕಿನ 40 ಭಾಗಗಳಲ್ಲಿ ಬೆಳೆಕಟಾವು ಸಮೀಕ್ಷೆ ನಡೆಸಿ ಪಾರದರ್ಶಕವಾಗಿ ವರದಿ ಸಲ್ಲಿಸಬೇಕು ಎಂದರು.

ಇನ್ನು ಜಿಲ್ಲಾ ಸಾಂಕಿಕ ಸಂಗ್ರಹಣ ಅಧಿಕಾರಿ ರವಿಕುಮಾರ್ ಮಾತನಾಡಿ ತಾಲೂಕಿನಲ್ಲಿ ಈಗಾಗಲೇ ತೊಗರಿ ಬೆಳೆ ಕಟಾವು ಸಮೀಕ್ಷೆ ನಡೆಯುತ್ತಿದ್ದು ತಾಲೂಕಿನ ನಾಲ್ಕು ಹೋಬಳಿಗಳಲ್ಲಿ 40 ಕಡೆ ಬೆಳೆ ಕಟಾವು ಸಮೀಕ್ಷೆ ನಡೆಸಿ ವರದಿಯನ್ನು ಕಳಿಸಲಾಗುವುದು ಅದರಂತೆ ಇಂದು ಕಾಪರಹಳ್ಳಿಯ ತಿಪ್ಪೇಸ್ವಾಮಿ ಎಂಬುವರಲದಲ್ಲಿ 10 ಮೀಟರ್ ಉದ್ದ 5 ಮೀಟರ್ ಅಗಲದ ವಿಸ್ತೀರ್ಣದಲ್ಲಿ ಪಾರದರ್ಶಕವಾಗಿ ರೈತರ ಸಮ್ಮುಖದಲ್ಲಿ ಬೆಳೆಕಟಾವು ಸಮೀಕ್ಷೆ ನಡೆಸಿ ತೊಗರಿ ಬೆಳೆಯ ಕಟಾವು ಸಮೀಕ್ಷೆಯಲ್ಲಿ ಸುಮಾರು ನಾಲ್ಕು ಕೆಜಿ 40 ಗ್ರಾಂ ತೊಗರಿ ಕಾಯಿ ಇಳುವರಿ ಬಂದಿರುವುದು ಕಂಡುಬಂದಿದೆ ಅದರಂತೆ ಇನ್ನು ಹಲವು ಭಾಗಗಳಲ್ಲಿ ಬೆಳೆ ಕಟಾವು ಸಮೀಕ್ಷೆ ನಡೆಸಿ ಈ ಎಲ್ಲಾ ವರದಿಗಳನ್ನು ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ರವಾನಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ,
ಉಪ ಕೃಷಿ ಜಿಲ್ಲಾ ಉಪ ಕೃಷಿ ನಿರ್ದೇಶಕ ಉಮೇಶ್ ಸಹಾಯಕ ಕೃಷಿ ಅಧಿಕಾರಿ ರಮೇಶ್ ಕೃಷಿ ಮೇಲ್ವಿಚಾರಕರ ಅಧಿಕಾರಿಯಾದ ಆರ್ ಅಶೋಕ್ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಗ್ರಾಮ ಲೆಕ್ಕಾಧಿಕಾರಿ ಕೇಶವಾಚಾರ್ಯ ತಾಂತ್ರಿಕ ಸಂಗ್ರಹಣಾ ಸಹಾಯಕ ಅಧಿಕಾರಿ ವೀಣಾ ಸಿಬ್ಬಂದಿಯಾದ ತಿಪ್ಪೇಸ್ವಾಮಿ ರೈತ ಮುಖಂಡ ದಿನೇಶ್ ರೆಡ್ಡಿ, ವೀರಣ್ಣ, ಅಬಕಾರಿ ತಿಪ್ಪೇಸ್ವಾಮಿ, ಇನ್ನಿತರ ಹಲವಾರು ರೈತ ಮುಖಂಡರುಗಳು ಸ್ಥಳದಲ್ಲಿ ಭಾಗವಹಿಸಿದ್ದರು…

About The Author

Namma Challakere Local News
error: Content is protected !!