ಕೈಗಾರಿಕೋದ್ಯಮಿಗಳಿಗೆ
ಇಲಾಖೆಯಿಂದ ಕೈಗಾರಿಕೋದ್ಯಮದಲ್ಲಿ ನವ್ಯ ತಾಂತ್ರಿಕತೆಯನ್ನು ಬಳಸಿಕೊಳ್ಳುವ
ಕುರಿತಂತೆ ಎರಡು ದಿನಗಳ ಜಾಗೃತಿ ಕಾರ್ಯಕ್ರಮ

ಚಿತ್ರದುರ್ಗ : ಆಯಿಲ್ ಸಿಟಿ ಚಳ್ಳಕೆರೆ ನಗರದಲ್ಲಿ ಕೈಗಾರಿಕೆಯನ್ನು ಉನ್ನತ್ತಿಕರಿಸಲು, ಕೈಗಾರಿಕೆ,ಹಾಗೂ ವಾಣಿಜ್ಯ ಇಲಾಖೆ ಸಹಯೋಗದೊಂದಿಗೆ ಎರಡು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರಾದ ಆನಂದ್ ಹೇಳಿದ್ದಾರೆ.

ಬಯಲು ಸೀಮೆಯ ‌ತಾಲೂಕಿನಲ್ಲಿ
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಚಿತ್ರದುರ್ಗ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್, (KCTU), ಬೆಂಗಳೂರು
ಹಾಗೂ ಕರ್ನಾಟಕ ತಾಂತ್ರಿಕ ಸಲಹಾ ಸಂಸ್ಥೆ (ಟೆಕ್ಸಾಕ್) ಬೆಂಗಳೂರು ಇವರ
ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಎರಡು ದಿನಗಳ “ಕೈಗಾರಿಕಾ
ತಾಂತ್ರಿಕಾಲಯ” (TECHNOLOGY CLINIC) ಕುರಿತಂತೆ ಕೈಗಾರಿಕೋದ್ಯಮಿಗಳಿಗೆ
ಇಲಾಖೆಯಿಂದ ಕೈಗಾರಿಕೋದ್ಯಮದಲ್ಲಿ ನವ್ಯ ತಾಂತ್ರಿಕತೆಯನ್ನು ಬಳಸಿಕೊಳ್ಳುವ
ಕುರಿತಂತೆ ಎರಡು ದಿನಗಳ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ: 22.12.2025 ಹಾಗೂ 23.12.2025 ರ ಬೆಳಗ್ಗೆ 10:30 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ
ಚೇಂಬರ್ ಆಫ್ ಕಾಮರ್ಸ್ ಸಮುಧಾಯ ಭವನ, ಎ.ಪಿ.ಎಂ.ಸಿ. ಯಾರ್ಡ್ ಮುಂಬಾಗ, ಬೆಂಗಳೂರು ರಸ್ತೆ, ಚಳ್ಳಕೆರೆ ಇಲ್ಲಿ ಹಮ್ಮಿಕೊಳ್ಳಲಾಗಿದ್ದು, ಸದರಿ
ಕಾರ್ಯಕ್ರಮಕ್ಕೆ ಕೈಗಾರಿಕೋದ್ಯಮಿಗಳು ಪಾಲ್ಗೊಂಡು ಕಾರ್ಯಕ್ರಮಗಳ
ಸದುಪಯೋಗ ಪಡೆದುಕೊಳ್ಳಬೇಕೆಂದು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ
ಕೇಂದ್ರ, ಚಿತ್ರದುರ್ಗ ರವರು ಕೋರಿಕೊಂಡಿರುತ್ತಾರೆ.

About The Author

Namma Challakere Local News
error: Content is protected !!