ತೊರೆಕೋಲಮ್ಮನಹಳ್ಳಿಯಲ್ಲಿ
ಅದ್ಧೂರಿಯ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ.
ನಾಯಕನಹಟ್ಟಿ-: ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರಗಿತು.
ತೋರೆಕೋಲಮ್ಮನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಪಾರಾಧನೆ, ಪಾದಗಟ್ಟೆವರಿಗೂ ಸ್ವಾಮಿಯ ಪಲ್ಲಕ್ಕಿ ಉತ್ಸವದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಬೆಳಗ್ಗೆ ಕಳಸ ಪೂಜೆ ನೆರವೇರಿಸಿದ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂವುಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿ ಸ್ವಾಮಿ ಬಸವೇಶ್ವರ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ತಂದು ರಥೋತ್ಸವದಲ್ಲಿ ಕೂರಿಸಿ ಪ್ರತಿಷ್ಠಪಿಸಲಾಯಿತು.
ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಗ್ರಾಮದ ಹುಗಿ ಗೌಡ್ರು ಕಲ್ಲೇಶ್ವರ ಮನೆಯಿಂದ ಬಲಿ ಅನ್ನ ತರಲಾಯಿತ್ತು.
ರಥೋತ್ಸವ ಮುನ್ನ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು ಗ್ರಾಮದ ಎಲ್ಐಸಿ ರಾಜಣ್ಣ 18.500 ಮುಕ್ತಿ ಭಾವುಟವನ್ನು ಪಡೆದುಕೊಂಡಿದ್ದರು.
ರಥೋತ್ಸವಕ್ಕೆ ಮಹಾ ಮಂಗಳಾರತಿ ನಂತರ ಗ್ರಾಮಸ್ಥರು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಶಿಕ್ಷಕ ಜಿ.ಪಿ.ಮಹಾಂತೇಶ್ ಮಾತನಾಡಿದರು.
ಶ್ರೀ ಬಸವೇಶ್ವರ ಸೇವಾ ಸಮಿತಿಯ ಟಿ ಚಂದ್ರಶೇಖರ್, ಸಭಾಪತಿ ತಿಪ್ಪೇಸ್ವಾಮಿ, ಕೆ.ಟಿ ಗಂಗಪ್ಪ, ಕೆ ಬಿ ಜಯಣ್ಣ, ಕೆ ಜಿ ತಿಪ್ಪಣ್ಣ, ತಾತಣ್ಣ, ಎ.ಬಿ. ವಿರುಪಾಕ್ಷಪ್ಪ, ನಿಂಗಜ್ಜ, ಹನುಮಂತಪ್ಪ, ಬಸವರಾಜಪ್ಪ,ಎನ್. ಟಿ ನಾಗೇಶ್ ಗೌಡ, ಈರಣ್ಣ, ಬಿ.ಟಿ. ತಿಪ್ಪೇರುದ್ರಸ್ವಾಮಿ. ಹಾಗೂ
ಅಬ್ಬೇನಹಳ್ಳಿ ಗ್ರಾಪಂ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಅನಿತಮ್ಮ ಜಿ.ಎಂ ಜಯಣ್ಣ, ಸದಸ್ಯರಾದ ಕೆ.ಜಿ. ತಿಪ್ಪೇಸ್ವಾಮಿ, ಸುಮಿತ್ರಮ್ಮ, ಮಾರಕ, ಗಾದ್ರಪ್ಪ, ಸೇರಿದಂತೆ ಸಮಸ್ತ ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರು ಹಾಗೂ ವಿವಿಧ ಹಳ್ಳಿಗಳ ಭಕ್ತಾದಿಗಳು ಮತ್ತಿತರರಿದ್ದರು.

