ಚಿತ್ರದುರ್ಗ: ರೈತನ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿ
ಚಿತ್ರದುರ್ಗದಲ್ಲಿ ಲಾಭದ ನಿರೀಕ್ಷೆಯಲ್ಲಿದ್ದ ರೈತ ಬಸವರಾಜ್,
ನಾಲ್ಕು ಎಕರೆ ಜಮೀನಿನಲ್ಲಿ 4 ಲಕ್ಷ ರೂ. ಖರ್ಚು ಮಾಡಿ ಈರುಳ್ಳಿ
ಬೆಳೆದಿದ್ದು, ಅತಿ ಮಳೆಯಿಂದಾಗಿ ಬೆಳೆ ನಾಶವಾಗಿ, ಈಗ ಬೆಲೆ ಸಿಗದೆ
ಕಂಗಾಲಾಗಿದ್ದಾರೆ. 500 ಪಾಕೆಟ್ ಈರುಳ್ಳಿ ಉಳಿದಿದ್ದು, ಖರ್ಚು
ಹೆಚ್ಚಾಗಿ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಪರಿಹಾರ
ನೀಡಬೇಕೆಂದು ರೈತ ಬಸವರಾಜ್ ಒತ್ತಾಯಿಸಿದ್ದಾರೆ.

