ಚಿತ್ರದುರ್ಗ: ಕರಾಳ ಕೃಷಿ ಕಾಯ್ದೆಗಳ ಪ್ರತಿಗಳನ್ನ
ಸುಡುತ್ತೇವೆ
ಮೈಸೂರಿನಲ್ಲಿ ಇದೇ 23 ರಂದು ನಡೆಯಲಿರುವ ಕೃಷಿ ಕಾಯ್ದೆಗಳ
ಪ್ರತಿ ಸುಡುವ ಪ್ರತಿಭಟನೆಗೆ ರೈತ ಮುಖಂಡ ಬಡಗಲನಾಗೇಂದ್ರ
ಕರೆ ನೀಡಿದ್ದಾರೆ. ಚಿತ್ರದುರ್ಗದಲ್ಲಿಂದು ಸುದ್ದಿಗೋಷ್ಠಿ ನಡೆಸಿದ
ಅವರು, ವಿಧಾನ ಸೌಧದಲ್ಲಿ ಪಕ್ಷಗಳು ಬದಲಾಗಿದ್ದರೂ ನೀತಿಗಳು
ಬದಲಾಗಿಲ್ಲ. ಹಿಂದೆ ವಿರೋಧಿಸಿದ್ದ ಕಾರ್ಮಿಕ ಮತ್ತು ರೈತ
ನೀತಿಗಳನ್ನೇ ಸರ್ಕಾರ ಮುಂದುವರೆಸುತ್ತಿದೆ. ಇದನ್ನು ಜನಪರ
ಹೋರಾಟದ ಮೂಲಕವೇ ಹಿಮ್ಮೆಟ್ಟಿಸಬೇಕೆಂದು ಅವರು
ಹೇಳಿದರು.

