ಚಿತ್ರದುರ್ಗ: ರೈಲಿಗೆ ಸಿಲುಕಿ ಮಹಿಳೆ ಸಾವು
ಚಿತ್ರದುರ್ಗದ ಎಪಿಎಂಸಿ ರೈಲ್ವೇ ಬ್ರಿಡ್ಜ್ ಬಳಿ ಶನಿವಾರ ಸಂಜೆ ರೈಲಿಗೆ
ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯ
ಗುರುತು ಇದುವರೆಗೆ ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ
ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ರೈಲು ಡಿಕ್ಕಿಯಾದ
ಪರಿಣಾಮ ಮಹಿಳೆಯ ದೇಹ ಸಂಪೂರ್ಣವಾಗಿ ಎರಡು ತುಂಡಾಗಿ
ಬೇರ್ಪಟ್ಟಿದೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ
ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ
ಘಟನೆ ನೂರಾರು ಜನರನ್ನು ಸ್ಥಳದಲ್ಲಿ ಜಮಾಯಿಸುವಂತೆ
ಮಾಡಿದೆ.

