ಚಳ್ಳಕೆರೆ : ಅಪರಾಧಿಗೆ ಶಿಕ್ಷೆ ತಪ್ಪಿದರೆ ಪರವಾಗಿಲ್ಲ ಆದರೆ ನಿರಪರಾಧಿಗೆ ಶಿಕ್ಷೆಯಾಗಬಾರದು ಇದಕ್ಕೆ ವಕೀಲರು ನ್ಯಾಯ ಹೊದಗಿಸಬೇಕು ಎಂದು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಸೊಮಗುದ್ದು ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ಸಮಾಜದ ಜ್ವಾಲಂತ ಸಮಸ್ಯೆಗಳ ನಿವಾರಣೆಗೆ ಮುಖ್ಯ ಪಾತ್ರವಹಿಸಬೇಕು. ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.
ಇನ್ನೂ ಹಿರಿಯ ಸಿವಿಲ್ ಮತ್ತು ಜೈ ಮತ್ತಿ ನ್ಯಾಯಾಧೀಶರಾದ ಸಮೀರ್ ಪಿ. ನಂದ್ಯಾಲ ಮಾತನಾಡಿ,
ನ್ಯಾಯಾಲಯದಲ್ಲಿ ವಾದ ಮಂಡಿಸಿ ತಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಟ್ಟಾಗ ವಕೀಲರಿಗೆ ಆಗುವ ಸಂತೋಷ, ಸಾರ್ಥಕ ಭಾವಕ್ಕೆ ಬೆಲೆ ತೆತ್ತಲು ಹಾಗದು, ‘ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಯಾವ ಪ್ರಶ್ನೆ ಕೇಳಬೇಕು? ಯಾವುದನ್ನು ಕೇಳಬಾರದು ಎನ್ನವ ಸ್ಪಷ್ಟತೆ ವಕೀಲರಿಗೆ ಇರಬೇಕು. ವರ್ಷವಿಡೀ ನಡೆಯುವ ನ್ಯಾಯಾಲಯ ಕೆಲಸದ ನಡುವೆ ಸಣ್ಣ ಖುಷಿ ನಿಡುವ ವಕೀಲರ ದಿನಾಚರಣೆ ಮಹತ್ವದ್ದಾಗಿದೆ’ ಎಂದರು.
ಪ್ರಧಾನ ಸಿವಿಲ್ ಮತ್ತು ಜೆಎಂಎಪ್ ಸಿ ನ್ಯಾಯಾಧೀಶರಾದ ಎಚ್ ಆರ್ ಹೇಮಾ ಮಾತನಾಡಿ ವಕೀಲರು
ಪೂರ್ವಾಗ್ರಹ ಪೀಡಿತರಾಗಿ ಚಿಂತಿಸುವುದು ಬೇಡ, ತಮ್ಮ ಕಕ್ಷಿದಾರರಿಗೆ ನ್ಯಾಯಕೊಡಿಸುವಲ್ಲಿ ನ್ಯಾಯ ಸಮ್ಮತವಾದ ವಾದವನ್ನು ಮಂಡಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆಯಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ, ನ್ಯಾಯಾಲಯ ಕಲಾಪ ಸುಸೂತ್ರವಾಗಿ ನಡೆಯಬೇಕಿದ್ದರೆ ಇಡೀ ನ್ಯಾಯಾಲಯ ಒಂದು ತಂಡವಾಗಿ ಕೆಲಸ ಮಾಡಬೇಕಿದೆ’, ಕಕ್ಷಿದಾರರಿಗೆ ನ್ಯಾಯದೊರಕಿಸುವ ನಿಟ್ಟಿನಲ್ಲಿ ಕಾರ‍್ಯನಿರ್ವಹಿಸಬೇಕು. ಬಡ ಕಕ್ಷಿದಾರನ ಶೋಷಣೆಯಾಗಬಾರದು,
ನ್ಯಾಯಾಂಗ ಇಲಾಖೆ ಯುವ ವಕೀಲರ ಮೇಲೆ ಹೊಸ ಭರವಸೆಗಳನ್ನು ಇಟ್ಟುಕೊಂಡಿದೆ ಎಂದರು.
ಇದೇ ಸಂಧರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷರಾದ ಕೆ ಎಂ ನಾಗರಾಜ್, ಉಪಾಧ್ಯಕ್ಷ ಬಿ.ಪಾಲಯ್ಯ, ಎಂ ಸಿದ್ದರಾಜು, ಸನ್ಮನಿತರಾದ ಬಿ.ಮಲ್ಲಿಕಾರ್ಜುನ, ಬಾಲಕೃಷ್ಣ ಸ್ವಾಮಿ ಎಸ್ ಟಿ ಹನುಮಂತ್ ರಾಯ, ಕೆ ಕುಮಾರ್ ಜಡೆಕುಂಟೆ, ಟಿ ಶ್ರೀನಿವಾಸ್ ಮೂರ್ತಿ,ಹಾಗೂ ಹಿರಿಯ ವಕೀಲರಾದ ಶರಣಪ್ಪಯ್ಯ, ತಮ್ಮಣ್ಣ ಕೆ ಜಯಪ್ಪ, ಕೆಬಿ ಪ್ರಭಾಕರ್, ವಕೀಲರ ಸಂಘ ಮಾಜಿ ಅಧ್ಯಕ್ಷ ಅಶ್ವತ್ ನಾಯಕ ಇತರರು ಇದ್ದರು.


