ಚಳ್ಳಕೆರೆ : ನಗರದಲ್ಲಿ ಸಾರ್ವಜನಿಕರ ಹಾಗೂ ಮಹಿಳೆಯರು ಇತದೃಷ್ಠಿಯಿಂದ ಸಂಚಾರಿ ಆಟೋಗಳಿಗೆ ಚಳ್ಳಕೆರೆ ನಗರ ಪೋಲೀಸ್ ಠಾಣೆಯಿಂದ ನೊಂದಾಯಿತ ಸಂಖ್ಯೆಯ ಆಟೋಗಳು ಸಂಚರಿಸಬೇಕು ಎಂದು ಪಿಎಸ್ಐ ಈರೇಶ್ ಹೇಳಿದರು.
ಅವರು ನಗರದ ಪೋಲೀಸ್ ಠಾಣೆ ಮುಂಬಾಗ ನಗರದ ಸಂಚಾರಿ ಆಟೋಗಳಿಗೆ ಪೋಲೀಸ್ ಠಾಣೆಯಿಂದ ನೀಡಿದ ಕ್ರಮ ಸಂಖ್ಯೆಯಲ್ಲಿ ಆಟೋಗಳ ಚಲನವಲನಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ, ಇನ್ನೂ ಎಲ್ಲಾ ನೊಂದಾಯಿತ ಆಟೋಗಳ ಸರಿಯಾದ ದಾಖಲೆಗಳು ಪತ್ತೆಹಚ್ಚಲು ಅನುಕೂಲವಾಗುತ್ತದೆ ಎಂದರು.
ಪಿಎಸ್ಐ ಧರೇಪ್ಪ ಬಾಳಪ್ಪ ದೊಡ್ಡಮನಿ ಮಾತನಾಡಿ, ರಾತ್ರಿವೇಳೆ ಮಹಿಳೆಯರು ಸುಗಮವಾಗಿ ಸಂಚರಿಸಲು, ಆರ್ ಟಿಒ ನೀಡಿದ ನಂಬರ್ ಗಳನ್ನು ನೆನಪಿನ ಲ್ಲಿ ಇಡಲು ಸಾಧ್ಯವಿಲ್ಲ ಇನ್ನೂ ಬದಲಾಗಿ ಪೋಲೀಸ್ ಠಾಣೆಯಿಂದ ನೀಡಿದ ಕ್ರಮ ಸಂಖ್ಯೆ ನೆನಪಿನಲ್ಲಿ ಇಟ್ಟರೆ ಸಾಕು ಸುಲಭವಾಗಿ ಆಟೋವನ್ನು ಪತ್ತೆ ಹಚ್ಚಬಹುದು ಇದರಿಂದ ಸುಗಮ
ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ಅನುಕೂಲ ವಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿ ತಿಲಕ್ ರಾಜ್, ನಾಗೇಂದ್ರ, ಹಾಗೂ
ನಗರದ ಐನೂರು ಆಟೋಗಳು ಚಾಲಕರು ಇದ್ದರು.


