ಚಿತ್ರದುರ್ಗ: ದಶಾವಾತಾರ ನೃತ್ಯ ರೂಪಕ ಪ್ರದರ್ಶನ
ಚಿತ್ರದುರ್ಗದ ಎಸ್.ಆರ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ
ಮೂರು ದಿನಗಳ ಕಾಲ ನಡೆದ ದೈವಿಕ ಕಥಾ ವಸ್ತುಗಳ ನೃತ್ಯ
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಶುಕ್ರವಾರ ಅದ್ದೂರಿಯಾಗಿ
ಪ್ರದರ್ಶನ ನೀಡಿದರು. ವಿಷ್ಣುವಿನ ದಶಾವತಾರ ನೃತ್ಯ ರೂಪಕದ
ಮೂಲಕ ಮಕ್ಕಳು ಪ್ರೇಕ್ಷಕರನ್ನು ರಂಜಿಸಿದರು. ಬಣ್ಣ ಬಣ್ಣದ
ಬೆಳಕುಗಳು ಮತ್ತು ಸ್ಪಾಟ್ ಲೈಟ್ ಗಳ ನಡುವೆ ನೂರಾರು
ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದು ಎಲ್ಲರ ಗಮನ ಸೆಳೆಯಿತು.

