ರಸ್ತೆ ನಿಯಮಗಳನ್ನು ಪ್ರತಿಯೊಬ್ಬ ವಾಹನ ಸವಾರರು ಪಾಲಿಸುವುದು ಕಡ್ಡಾಯ: ಪಿಎಸ್ಐ ಜಿ. ಪಾಂಡುರಂಗಪ್ಪ
ನಾಯಕನಹಟ್ಟಿ: ವಾಹನ ಸವಾರರು ಸಂಚಾರರಿ ನಿಯಮಗಳನ್ನು ಪಾಲಿಸದೆ ಇರುವುದು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಜಿ. ಪಾಂಡುರಂಗಪ್ಪ ಹೇಳಿದರು.
ಮಂಗಳವಾರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ನಾಯಕನಟ್ಟಿ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಹಮ್ಮಿಕೊಂಡಿದ್ದ ರಸಪ್ರಶ್ನೆಗಳ ಕಾರ್ಯಕ್ರಮದಲ್ಲಿ ಹೆಚ್ಚಿನ ಅಂಕ ಪಡೆದಂತಹ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಹಾಗೂ ಶಾಲೆಗಳಲ್ಲಿ ಸಂಚಾರಿ ನಿಯಮಗಳ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನವಾಗಿ ಹೆಲ್ಮೆಟ್ ವಿತರಣೆ ಮಾಡಿ ಮಾತನಾಡಿದರು.
ವಾಹನ ಸವಾರರು ನಿಯಮಗಳನ್ನು ಪಾಲಿಸಿ ಸುಗಮ ಸಂಚಾರದ ಜೊತೆಗೆ ರಸ್ತೆ ಅಪಘಾತಗಳ ನಿಯಂತ್ರಣ ಸಾಧ್ಯವಾಗುತ್ತದೆ. ಹೆಲೈಟ್, ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ವಾಹನ ಚಾಲಾಯಿಸುವ ಸಂದರ್ಭದಲ್ಲಿ ನಮ್ಮ ಜೀವದ ಜೊತೆ, ಪಾದಚಾರಿ ಮತ್ತು ಎದುರುಗಡೆಯಿಂದ
ಬರುವ ಸವಾರರ ಬಗ್ಗೆಯೂ ಜಾಗೃತಿ ಮತ್ತು ಕಾಳಜಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಟಿ .ಬಸಪ್ಪ ನಾಯಕ ,ಪಟ್ಟಣದ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಅಣ್ಣಪ್ಪ ನಾಯ್ಕ, ಭಾಷಾ ,ಶ್ರೀಹರಿ, ಶಿವರಾಜ್, ಹನುಮಂತ, ಮಹಿಳಾ ಪೊಲೀಸ್ ಪೇದೆಗಳಾದ ಲಕ್ಷ್ಮೀದೇವಿ, ಚೈತ್ರ ಸೇರಿದಂತೆ ಹಲವರಿದ್ದರು.

