ಖಾಸಗಿ ಬಸ್ ಗಳ ಪೈಪೋಟಿ : ಪ್ರಯಾಣಿಕರಿಗೆ ಅಪಘಾತ..?

ಚಳ್ಳಕೆರೆ : ಚಾಲಕನ ನಿಯಂತ್ರಣ
ತಪ್ಪಿ ಖಾಸಗಿ ಬಸ್ ಮರಕ್ಕೆ ಡಿಕ್ಕಿಯಾದ ಘಟನೆ ತಾಲ್ಲೂಕಿನ
ದಂಡಿನ ಕುರುಬರಹಟ್ಟಿ ಬಳಿ ಇಂದು ಬೆಳಿಗ್ಗೆ 8:30 ರ ಸುಮಾರಿಗೆ
ನಡೆದಿದೆ.

ಈ ಅಪಘಾತದಲ್ಲಿ ಆರು ಮಂದಿ ಪ್ರಯಾಣಿಕರಿಗೆ
ಗಾಯಗಳಾಗಿವೆ. ಚಳ್ಳಕೆರೆಯಿಂದ ಚಿತ್ರದುರ್ಗದ ಕಡೆಗೆ ಬರುತ್ತಿದ್ದ ಎರಡು ಖಾಸಗಿ‌ಬಸ್ ಗಳು ದಂಡಿನ ಕುರುಬರಹಟ್ಟಿ ಸಮೀಪ ಒಂದು ಬಸ್
ಮತ್ತೊಂದು ಬಸ್ಸನ್ನು ಓವರ್ ಟೇಕ್ ಮಾಡುವಾಗ ಬಲಭಾಗದಲ್ಲಿದ್ದ
ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಲ ಬದಿಯ ಮರಕ್ಕೆ ಡಿಕ್ಕಿ
ಹೊಡೆದಿದೆ.

ಡಿಕ್ಕಿಯ ಪರಿಣಾಮಕ್ಕೆ ಬಸ್‌ನ ಮುಂಭಾಗ ಸಂಪೂರ್ಣ
ನಜ್ಜುಗುಜ್ಜುಗಿದೆ. ಚಾಲಕನ ಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ.
ಸುಮಾರು
ಆರು ಮಂದಿಗೆ ಗಾಯಗಳಾಗಿದ್ದು ಅವರನ್ನು ಚಿತ್ರದುರ್ಗ ಜಿಲ್ಲಾ
ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ.

About The Author

Namma Challakere Local News
error: Content is protected !!