ಚಿತ್ರದುರ್ಗ: ರಾಜ್ಯದ ನೀರಾವರಿಗಳಿಗೆ 30 ಸಾವಿರ
ಕೋಟಿ ಬಿಡುಗಡೆ ಮಾಡಿ
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ
ಅಂಬಿಕಾ ಹುಲಿನಾಯಕರ್, ಅಪ್ಪರ್ ಭದ್ರಾಯೋಜನೆ,
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾಲುವೆ, ಟನಲ್ ರಿಪೇರಿ,
ಮೇಕೆದಾಟು ಯೋಜನೆಗಳು ಹಾಗೂ ರಾಜ್ಯದ ಇತರ ನೀರಾವರಿ
ಯೋಜನೆಗಳ ಅನುಷ್ಠಾನಕ್ಕೆ, ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಂತೆ
ಪ್ರತಿವರ್ಷ 30 ಸಾವಿರ ಕೋಟಿ ರೂ. ನೀಡಿ ಕಾಮಗಾರಿಗಳನ್ನು
ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕಿಸಾನ್
ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಗೆ ವಾರ್ಷಿಕ 4
ಸಾವಿರ ರೂ. ನೀಡಬೇಕು ಎಂದೂ ಅವರು ಒತ್ತಾಯಿಸಿದರು.

About The Author

Namma Challakere Local News
error: Content is protected !!