ಚಳ್ಳಕೆರೆ : ಕೊವಿಡ್ ಎರಡನೇ ಅಲೆಯಲ್ಲಿ ಸಂಕಷ್ಟ ಎದುರಿಸಿದ ಜನತೆಗೆ ಬೂಷ್ಟರ್ ಡೋಸ್ ರಾಮಬಾಣವಾಗಿ ಪರಿಣಮಿಸಿದೆ ಆದ್ದರಿಂದ ಪ್ರತಿಯೊಬ್ಬರು ಲಸಿಕೆ ಪಡೆಯಬೇಕು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕು ಕಛೇರಿಯಲ್ಲಿ ನಗರ ಆರೋಗ್ಯ ಘಟಕ ಆಸ್ಪತ್ರೆಯಿಂದ ಆಮ್ಮಿಕೊಂಡ ಕೊವಿಡ್ ಬೂಸ್ಟರ್ ಡೋಸ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು
ತಾಲೂಕಿನಲ್ಲಿ ಈಗಾಗಲೇ ಮೊದಲೆನೇ ಹಾಗೂ ಎರಡನೇ ಕೊವಿಡ್ ಲಸಿಕೆ ಶೇಕಡಾ ನೂರ ಮೂರರಷ್ಟು ಪ್ರಗತಿ ಕಂಡಿದ್ದೆವೆ ಆದ್ದರಿಂದ ಇನ್ನೂ ಕೊವಿಡ್ ಮುಂಜಾಗ್ರತೆಯಾಗಿ 18 ವರ್ಷ ತುಂಬಿದ ಎಲ್ಲಾ ವರ್ಗದ ಜನರು ಬೂಸ್ಟರ್ ಡೋಸ್ ಲಸಿಕೆ ಪಡೆದು ಆರೋಗ್ಯ ವಂತರಾಗಲು, ಸಾರ್ವಜನಿಕರು ಕಾಳಜಿ ವಹಿಸಬೇಕು ಎಂದರು.
ಈದೇ ಸಂಧರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ , ಗ್ರಾಮಲೆಕ್ಕಾಧಿಕಾರಿ ಶಿವಮೂರ್ತಿ, ಬೂಸ್ಟರ್ ಡೋಸ್ ಲಸಿಕೆ ಪಡೆದರು, ಸ್ಥಳದಲ್ಲಿ ಕಂದಾಯ ಅಧಿಕಾರಿ ರಾಜೇಶ್, ಉಮೇಶ್, ಹಾಗೂ ನಗರ ಘಟಕ ಆರೋಗ್ಯ ಸಹಾಯಕ ಅಧಿಕಾರಿ ಸಂಜಯ್, ನಂದಿನಿ, ರಾಜು, ಇತರರು ಪಾಲ್ಗೊಂಡಿದ್ದರು.