ಚಳ್ಳಕೆರೆ : ಚಳ್ಳಕೆರೆ ನಗರಸಭೆಗೆ ನೂತನವಾಗಿ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಸಿ.ಚಂದ್ರಪ್ಪ ಇವರನ್ನು ದಲಿತ ಮುಖಂಡರು ಆತ್ಮೀಯವಾಗಿ ಸ್ವಾಗತ ಕೋರಿದರು.
ಇನ್ನೂ ಗುರುವಾರ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಸಿ.ಚಂದ್ರಪ್ಪ ಇವರನ್ನು ದಲಿತ ಮುಖಂಡರು ಶಾಲು ಹೊದಿಸಿ ಹೂವುಮಾಲೆ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು
ನಂತರ ಮಾತನಾಡಿದ ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯ್ ಕುಮಾರ್ , ನಗರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು , ಕೊಳಚೆ ಪ್ರದೇಶಗಳ ಜನರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳ ಪ್ರಥಮ ಆಧ್ಯತೆ ನೀಡಬೇಕು ಮನವಿ ಮಾಡಿದರು.
ಇನ್ನೂ ಮುಖಂಡ ಭಿಮಣ್ಣ ಮಾತನಾಡಿ, ಈಗಾಗಲೇ ನಗರದಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿದ ಪೌರಾಯುಕ್ತರು ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು, ನಗರದಲ್ಲಿ ಪೌರಾ ಕಾರ್ಮಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನರಿಸಬೇಕು ಎಂದರು.
ಈದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ , ಸದಸ್ಯ ರಾಘವೇಂದ್ರ, ಎಸ್.ಜಯಣ್ಣ, ಕವಿತಾ ಬೀರಣ್ಣ, ಮುಖಂಡ ಮಾರಣ್ಣ, ಡಿ.ಚಂದ್ರು, ಮೈತ್ರಿ ದ್ಯಾಮಣ್ಣ, ಉಮೇಶ್ ಚಂದ್ರು ಬ್ಯಾನರ್ಜಿ, ಭೀಮಣ್ಣ, ಮುಖಂಡ ಹಳೆನಗರ ವೀರಭದ್ರಿ, ಬಂಗ್ಲೆಶ್ರೀನಿವಾಸ್, ವಿನೋದ್ ಕುಮಾರ್, ಮುಖಂಡ ಅಂಜಿನಪ್ಪ, ಹೊನ್ನುರಸ್ವಾಮಿ,
ಅಣ್ಣಪ್ಪ, ಸತೀಶ್, ಅಂಜಿನಪ್ಪ ಹಾಗೂ
ಸಿಬ್ಬಂದಿ ಸ್ವಾಗತಕೋರಿದರು.