ಚಳ್ಳಕೆರೆ : ಪೊಲೀಸ್ ಬ್ಯಾರಿಕೇಡ್ ಅನ್ಯ ಕೆಲಸಗಳಿಗೆ ಉಪಯೋಗ
ಹೌದು ನಗರದ ಪ್ರಮುಖ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣ ಸಮೀಪದ ಚಿತ್ರದುರ್ಗ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಬರುವ ಸಿಬ್ಬಂದಿಗಳಿಗೆ ಹಾಗು ಅಂಬ್ಯೂಲೆನ್ಸ್ ವಾಹನಗಳ ಓಡಾಟಕ್ಕೆ ಅಡ್ಡವಾಗಿ ನಿಲ್ಲಿಸುವ ಖಾಸಗಿ ಬಸ್ ಗಳು ಹಾಗೂ ಆಟೋಗಳ ಕಡಿವಾಣಕ್ಕೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ
ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಖಾಸಗಿ ಬಸ್ ವಾಹನ ಸಾವರರ ಕಡಿವಾಣ ಹಾಕಲು ಮುಖ್ಯ ರಸ್ತೆಯ ಮಧ್ಯೆಭಾಗದಲ್ಲಿ ಬ್ಯಾರಿಕೇಡ್ ಅಡ್ಡವಾಗಿ ನಿಲ್ಲಿಸಿದ್ದರು.
ಆದರೆ ಮೊದಲ ದಿನ ಮಾತ್ರ ಸಾರ್ವಜನಿಕ ಆಸ್ಪತ್ರೆಗೆ ಹೋಗಲು ದಾರಿಗೆ ಸುಗಮ ವ್ಯವಸ್ಥೆ ಕಲ್ಪಿಸಿದಾದರರು ..!!
ನಂತರ ಖಾಸಗಿ ಹೋಟೆಲ್, ಹಾಗು ಲಾಡ್ಜ್ ಇರುವ ಬೃಹತ್ ಕಟ್ಟಡಕ್ಕೆ ರಕ್ಷಣೆ ನೀಡಿ ಮಧ್ಯೆ ರಸ್ತೆಯಲ್ಲಿ ಲಾಡ್ಜ್ ಗೆ ಹಾಗು ಹೊಟೆಲ್ ಗೆ ಬರುವ ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ದ್ವಿಪಥ ರಸ್ತೆಯ ಸಿಂಗಲ್ ರಸ್ತೆಯನ್ನು ಬಿಟ್ಟು ಉಳಿದ ಎಲ್ಲಾ ಜಾಗವನ್ನು ಅಲ್ಲಿನ ಮಳಿಗೆಗೆ ಬರುವ ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಗೆ ಪೊಲೀಸ್ ಬ್ಯಾರಿಕೇಡ್ ರಕ್ಷಣೆ ನೀಡುವಂತೆ ಇದೆ .
ಆದರೆ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡುವ ಪೊಲೀಸ್ ಇಲಾಖೆ ಈ ತೆರೆನಾದ ಬ್ಯಾರಿಕೇಡ್ ನಿರ್ಮಾಣ ಮಾಡಿದ್ದರಿಂದ ಸಾರ್ವಜನಿಜರು ಪರದಾಡುವಂತಾಗಿದೆ
ಚಿತ್ರದುರ್ಗ ಹಾಗೂ ಪಾವಗಡ ಮಾರ್ಗವಾಗಿ ತೆರಳುವ ವಾಹನಗಳು ಸಿಂಗಲ್ ರಸ್ತೆಯಲ್ಲಿ ಓಡಾಡುವ ಮೂಲಕ ಟ್ರಾಫಿಕ್ ಜಾಮ್ ಹಾಗುವ ರೀತಿಯಲ್ಲಿ ಇದೆ .
ಆದರೆ ಈ ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕರು, ವಾಹನಗಳು ಓಡಾಡುವ ಅನಿವಾರ್ಯತೆ ಕೂಡ ಎದುರಾಗಿದೆ
ಇನ್ನಾದರೂ ಪೊಲೀಸ್ ಇಲಾಖೆ ಮನಗಾಣಬೇಕಿದೆ ರಕ್ಷಣೆ ನೀಡುವ ಬ್ಯಾರಿಕೇಡ್ ಗಳು ಸುಗಮ ಸಂಚಾರ ವ್ಯವಸ್ಥೆಗೋ ಅಥವಾ ಹೋಟೆಲ್, ಲಾಡ್ಜ್ ಗೆಬರುವ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಗೋ ಎಂಬುದು ಮನಗಾಣಬೇಕಿದೆ.