ಚಳ್ಳಕೆರೆ : ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಗುಣಮಟ್ಟದ ಶಿಕ್ಷಣದ ಜೊತೆ ರಾಷ್ಟ್ರ ಅಭಿಮಾನ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಬಗ್ಗೆ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಪರಿಚಯಿಸುವ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.
ಅವರು ಹೊಂಗಿರಣ ಇಂಟರ್ ನ್ಯಾಷನಲ್ ಪ್ರೌಡ
ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವದ ಸಮಾರಂಭದಲ್ಲಿ ಮಾತನಾಡಿದ ಅವರು ಭಾರತದ ಏಳು ನೂರು ಜನ ಸೈನಿಕರು ತಮ್ಮ ತ್ಯಾಗ ಬಲಿದಾನದ ಮೂಲಕ ತಮ್ಮ ನೆತ್ತರವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಪಾಕಿಸ್ತಾನದ 5,000 ಸೈನಿಕರನ್ನು ದ್ವಂಸ ಮಾಡಿ ಭಾರತಾಂಬೆಯ ವಿಜಯ ಪತಾಕಿಯನ್ನು ಆರಿಸಿದಂತ ದಿನ ಇದು ಆದುದರಿಂದ ಇಂತಹ ವೀರ ಮರಣವನ್ನು ಅಪ್ಪಿದ ಮತ್ತು ಭಾರತಕ್ಕೆ ವಿರೋಚಿತ ಗೆಲುವನ್ನು ತಂದು ಕೊಟ್ಟಂತ ಸೈನಿಕರಿಗೆ ಈ ದಿನ ನಾವುಗಳೆಲ್ಲರೂ ಕೂಡ ನಮ್ಮ ಅಶ್ರುತರ್ಪಣೆಯನ್ನು ಸಮರ್ಪಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ ನಾಗಪ್ಪ ಮಾತನಾಡಿ, ಮಕ್ಕಳು ತಮ್ಮ ಪದವಿ ನಂತರದ ಕಾಲಘಟ್ಟದಲ್ಲಿ ಸೈನ್ಯದಲ್ಲಿ ಉನ್ನತ ಮಟ್ಟದ ಪರೀಕ್ಷೆಗಳಾದ ಏನ್ ಡಿ ಎ ಮತ್ತು ಸಿ ಡಿ ಎಸ್ ಪರೀಕ್ಷೆಗೆ ಮಕ್ಕಳನ್ನು ಅಣಿಗೊಳಿಸುವ ಮೂಲಕ ರಾಷ್ಟ್ರಕ್ಕೆ ಇಂತಹ ಕೊಡುಗೆಯನ್ನು ಸಮರ್ಪಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ರಾಜೇಶ್ ಗುಪ್ತ ಮಾತನಾಡಿ, ಇಂದು ನಾವುಗಳು ಸೈನಿಕರ ತ್ಯಾಗ ಬಲಿದಾನಗಳನ್ನು ನೆನೆಯಬೇಕಿದೆ ಇವತ್ತಿನ ಸಮಾರಂಭದಲ್ಲಿರುವಂತಹ ಮೂರು ಜನ ಸೈನಿಕರು ತಮ್ಮ ಅವಧಿಯಲ್ಲಿ ಕಾರ್ಗಿಲ್ನಲ್ಲಿ ಕೆಲಸ ಮಾಡಿ ಭಾರತದ ವಿರೋಚಿತ ಗೆಲುವಿಗೆ ಕಾರಣರಾಗಿದ್ದಾರೆ ಎಂದರು.
ದೇಶಕ್ಕೆಕೊಡುಗೆ :
ಇಂದಿನ ದಿನ ಗೌರವಿತವಾಗಿ ಸನ್ಮಾನಿಸಿ ತಾಲೂಕು ಆಡಳಿತದ ವತಿಯಿಂದ ಇವರನ್ನು ಅಭಿನಂದಿಸುತಿದ್ದೇವೆ ಹಾಗೂ ಮುಂದಿನ ತಿಂಗಳು ನಡೆಯುವಂತ 75ನೇ ಸ್ವತಂತ್ರ ದಿನಾಚರಣೆಯಲ್ಲಿ ಎಂದೆಂದೂ ಕಂಡು ಕೇಳರಿಯಾದಂತ ಅಮೋಘವಾದ ಸಮಾರಂಭವನ್ನು ಕ್ಷೇತ್ರದ ಶಾಸಕರ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ,
ಈ ಶಾಲೆಯ ಮಕ್ಕಳು ಕೂಡ ದೇಶಾಭಿಮಾನಕ್ಕೆ ಸಂಬಂಧಿಸಿದ ಒಂದು ಸುಂದರ ನೃತ್ಯರೂಪಕವನ್ನು ಈ ಸಮಾರಂಭಕ್ಕೆ ಒದಗಿಸಬೇಕು.. —- ತಹಶೀಲ್ದಾರ್ ಎನ್ ರಘುಮೂರ್ತಿ
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ನಾಗಪ್ಪ, ಶಿವು ಪ್ರಸಾದ್, ರಾಜೇಶ್ ಗುಪ್ತ, ಹೊಂಗಿರಣ ಇಂಟರ್‌ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ದಯಾನಂದ,
ಹಾಗು ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು, ಮಕ್ಕಳು ಪಾಲ್ಗೊಂಡಿದ್ದರು.
ವರದಿ : ರಾಮಾಂಜನೇಯ ಕೆ.—9740799983