ತಹಸಿಲ್ದಾರ್ ಎನ್.ರಘುಮೂರ್ತಿರವರ ಹುಟ್ಟುಹಬ್ಬಕ್ಕೆ ಗಣ್ಯರು, ಸಾರ್ವಜನಿಕರಿಂದ ಶುಭಾಷಯಗಳ ಸುರಿಮಳೆ
ಚಳ್ಳಕೆರೆ: ತಾಲೂಕಿನಾದ್ಯಂತ ಸರಕಾರದಿಂದ ಕೊಡಮಾಡುವ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಜನರಿಗೋಸ್ಕರ ಹಗಲು ಇರುಳು ಎನ್ನದೆ ಶ್ರಮಿಸುತ್ತಿರುವ ತಹಸಿಲ್ದಾರ್ ಎನ್ ರಘುಮೂರ್ತಿರವರ ಹುಟ್ಟುಹಬ್ಬಕ್ಕೆ ತಾಲೂಕಿನ ಹಲವು ಗಣ್ಯರು, ಸಾರ್ವಜನಿಕರು ಶುಭಾಷಯ ಕೊರುತ್ತಾ ಸಂತಸದ ನುಡಿಗಳನ್ನು ಹಾಡಿದ್ದಾರೆ.
ಅದೇ ರೀತಿಯಲ್ಲಿ ಇಂದು ನಡೆದ ತಾಲೂಕು ಮಟ್ಟದ ಪ್ರಗತಿ ಪರೀಶಿಲನಾ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ತಹಶೀಲ್ದಾರ್ ಎನ್.ರಘುಮೂರ್ತಿಗೆ ಶುಭಾಶಯ ಕೋರಿದ್ದಾರೆ,
ಅದರಂತೆ ನಗರದ ನೆಹರು ವೃತ್ತದಲ್ಲಿ ತಾಲೂಕಿನ ತಹಸಿಲ್ದಾರ್ ಎನ್ ರಘುಮೂರ್ತಿ ಹುಟ್ಟುಹಬ್ಬದ ಆಚರಣೆ ನಿಮಿತ್ತ ಸಾರ್ವಜನಿಕರು ಕೆಕ್‌ಕಟ್ ಮಾಡುವುದರ ಮೂಲಕ ಸಂತಸ ಹಂಚಿಕೊAಡಿದ್ದಾರೆ, ನಂತರ ಮಾತನಾಡಿದ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಪಟೇಲ್ ಜಿಎಂ.ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ತಾಲೂಕಿನ ನೊಂದ ಸಾವಿರಾರು ಜನರ ಸಮಸ್ಯೆಗಳನ್ನು ಪರಿಹರಿಸಿ ಸಮಸ್ಯೆ ಮುಕ್ತ ಗ್ರಾಮ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಜನ ಸ್ನೇಹಿ ಕೆಲಸ ಮಾಡುವ ಇಂತಹ ಅಧಿಕಾರಿಗಳು ಜನಸಾಮಾನ್ಯರ ಮಧ್ಯೆ ಇರವುದು ವಿರಳ ಇಂತಹ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರು ಹೃದಯ ಶ್ರೀಮಂತಿಕೆ ತೋರಿಸಿಸುತ್ತದೆ ಎಂದರು.
ನAತರ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ನಗರದ ಅಜ್ಜನ ಗುಡಿಯಲ್ಲಿ ದೇವರ ಆಶ್ರೀðವಾದ ಪಡೆದರು.
ಈ ಸಂದರ್ಭದಲ್ಲಿ ರೈತರ ಸಂಘದ ರೆಡ್ಡಿಹಳ್ಳಿವೀರಣ್ಣ, ಭೀಮಗೊಂಡನಹಳ್ಳಿ ಹನುಮಣ್ಣ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ.ಬಸಣ್ಣ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ.ರಂಗಪ್ಪ, ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕಾಟಯ್ಯ, ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ.ಮುದಿಯಪ್ಪ, ಬಂಗಾರಪ್ಪ ನಾಯಕನಹಟ್ಟಿ, ಬೋರ್ ಸ್ವಾಮಿ, ಜಿವೈ.ತಿಪ್ಪೇಸ್ವಾಮಿ ನೆಲಗತನಹಟ್ಟಿ, ಚೌಳ್ಳಕೆರೆ ಕರಿಬಸಪ್ಪ, ಏಜೆಂಟ್ರು ಪಾಲಯ್ಯ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎನ್ ಟಿ ಕೊಡಿ ಭೀಮರಾಯ್, ಜೋಗಿಹಟ್ಟಿ ಎಚ್ ಬಿ ತಿಪ್ಪೇಸ್ವಾಮಿ, ಜಾಗನೂರಹಟ್ಟಿ ಮಂಜುನಾಥ್, ಕಾಟಯ್ಯ ಹೋಬಳಿ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು