ಚಳ್ಳಕೆರೆ : ನಗರಸಭೆ ಆಡಳಿತವಾಧಿಯ ಸದಸ್ಯತ್ವ ಮುಗಿದು ಜಿಲ್ಲಾಧಿಕಾರಿಗಳ ಆಡಳಿತಾಧಿಕಾರಿಗಳಾಗಿ ನೇಮಕಗೊಂಡು, ನಗರಸಭೆ ಅಧ್ಯಕ್ಷರ ಕಛೇರಿಗೆ ಜಿಲ್ಲಾಧಿಕಾರಿಗಳು ಆಡಳಿತ ಅಧಿಕಾರಿಗಳು ಎಂದು ನಾಮಫಲಕ ಅಳವಡಿಸಿದ್ದರು ಕೂಡ ಪೌರಾಯುಕ್ತರ ಸಮ್ಮುಖದಲ್ಲಿ ಮಾಜಿ ನಗರಸಭೆ ಅಧ್ಯಕ್ಷರು, ಸದಸ್ಯರು ಕಛೇರಿಯಲ್ಲಿ ಪೂಜೆ ಸಲ್ಲಿಸುವುದನ್ನು ಪ್ರಶ್ನಿಸಿದ ಪತ್ರಕರ್ತರ ಮೇಲೆ ಆಕ್ರೋಶ ಭರಿತವಾಗಿ ಕೂಗಾಡಿದ ಪೌರಾಯುಕ್ತರ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಇನ್ನೂ ನಗರಸಭೆ ಆಡಳಿತಾಧಿಕಾರಿಗಳ ಕೊಠಡಿಯಲ್ಲಿ ಮಾಜಿ ಸದಸ್ಯರು ಪೂಜೆಯನ್ನು ಸಲ್ಲಿಸುವ ಉದ್ದೇಶವಾದರು ಎನ್ನಿತ್ತು ಎಂದು ಸಾರ್ವಜನಿಕ ಪ್ರಶ್ನೇಯಾಗಿದೆ.
ಇನ್ನೂ ಮಾಧ್ಯಮದವರ ಮೇಲೆ ದರ್ಪ ತೋರುವ ಇವರ ವರ್ತನೆ ನಗರಸಭೆ ಕಛೇರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ..
ಒಟ್ಟಾರೆ ಪೌರಾಯುಕ್ತರ ಈ ದುರ್ತನೆಗೆ ಕೆಲ ಜನಪ್ರತಿನಿಧಿಗಳ ಕುಮ್ಮಕ್ಕು ಇದೆಯೆಂದು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಹಬ್ಬಿದೆ, ಇನ್ನೂ ಜಿಲ್ಲಾಧಿಕಾರಿಗಳು ನಗರಸಭೆ ಆಡಳಿತದ ವೈಖರಿಯ ಬಗ್ಗೆ ಕ್ರಮ ಜರುಗಿಸುವರಾ ಕಾದು ನೋಡಬೇಕಿದೆ.

