ಹಿರಿಯೂರು: ಕುರಿ ಕಳ್ಳನ ಬಂಧಿಸಿದ ಪೊಲೀಸರು
ಹಿರಿಯೂರಿನ ಅಬ್ಬಿನ ಹೊಳೆ ಪೊಲೀಸರು 9.92 ಲಕ್ಷ ಮೌಲ್ಯದ
ಕುರಿಗಳನ್ನು ಕಳವುಗೈದಿದ್ದ ಶಿರಾದ ದ್ವಾರನಕುಂಟೆ ಲಕ್ಷ ಕಾಂತ
ಎಂಬಾತನನ್ನು ಬಂಧಿಸಿದ್ದಾರೆ. ಕಳೆದ 1ರಂದು ಕುರಿ ರೊಪ್ಪದಿಂದ
ಸುಮಾರು 100 ಕುರಿಗಳು ಕಳುವಾಗಿದ್ದವು. ಐಮಂಗಲಾ ಠಾಣೆ
ಸಿಪಿಐ ಗುಡ್ಡಪ್ಪ ಹಾಗೂ ಅಬ್ಬಿನಹೊಳೆ ಠಾಣೆ ಪಿಎಸೈ ದೇವರಾಜ್
ಅವರ ತಂಡವು ಕಾರ್ಯಾಚರಣೆ ನಡೆಸಿ ಕಳ್ಳನನ್ನು ಹಿಡಿದು
ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ
ಕಳುಹಿಸಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು
ತಿಳಿಸಿದ್ದಾರೆ.

About The Author

Namma Challakere Local News
error: Content is protected !!