“ಅಘೋರಮಣಿಯ ವಾತ್ಸಲ್ಯಭಾವದ ಸಾಧನಾ ಜೀವನ ರೋಮಾಂಚನಕಾರಿ”:- ಶ್ರೀಮತಿ ಅಂಬುಜಾ ಶಾಂತಕುಮಾರ್. ಚಳ್ಳಕೆರೆ:-ಅಘೋರಮಣಿಯ ವಾತ್ಸಲ್ಯಭಾವದ ಸಾಧನಾ ಜೀವನ ಅತ್ಯಂತ ರೋಮಾಂಚನಕಾರಿ ಮತ್ತು ನಮ್ಮೆಲ್ಲರಿಗೂ ಮಾರ್ಗದರ್ಶಿಯದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅಂಬುಜಾ ಶಾಂತಕುಮಾರ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-2″ರ ಗ್ರಂಥ ಪಾರಾಯಣವನ್ನು ಮಾಡುತ್ತ “ವರವಾದ ವೈಧವ್ಯ” ಅಧ್ಯಾಯವನ್ನು ವಾಚಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ, ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಮಂಜುಳಾ ಉಮೇಶ್, ಸುಧಾಮಣಿ, ಜಿ.ಯಶೋಧಾ ಪ್ರಕಾಶ್,ವೆಂಕಟಲಕ್ಷ್ಮೀ, ಯತೀಶ್ ಎಂ ಸಿದ್ದಾಪುರ, ಪುಷ್ಪಲತಾ, ಸಂತೋಷ್ ಪಾಲ್ಗೊಂಡಿದ್ದರು.

