ಜಾಗನೂರಹಟ್ಟಿಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೀಪಾವಳಿ (ದೀವಳಿಗೆ) ಹಬ್ಬ ಅದ್ದೂರಿ ಆಚರಣೆ.

ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.

ನಾಯಕನಹಟ್ಟಿ: ಬುಡಕಟ್ಟು ಸಂಸ್ಕೃತಿಯ ಮ್ಯಾಸನಾಯಕರ ಆರಾಧ್ಯ ದೈವ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೇವರ ಅಂಗವಾಗಿ ದೀಪಾವಳಿ (ದೀವಳಿಗೆ). ಹಬ್ಬ ಸಂಭ್ರಮ ಸಡಗರದಿಂದ. ಮಂಗಳವಾರ ಅದ್ದೂರಿಯಾಗಿ ಜರಗಿತು,

ಮಂಗಳವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೈವ ಶ್ರೀ ಗಾದ್ರಿ ಪಾಲನಾಯಕ ಸ್ವಾಮಿ ದೀಪಾವಳಿ (ದಿವಳಿಗೆ)ಹಬ್ಬ ಪ್ರತಿ ವರ್ಷದ ಸಂಪ್ರದಾಯದಂತೆ ಆಚರಿಸಲಾಗುತ್ತದೆ, ಶ್ರೀ ಗಾದ್ರಿಪಾಲ ನಾಯಕ ಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದಲೇ ಪೂಜಾ ಕೈಂಕಾರ್ಯಗಳು ವಿವಿಧ ಕಾರ್ಯಗಳು ಅದ್ದೂರಿಯಾಗಿ ಜರುಗಿದವು.
ಇನ್ನೂ ಗ್ರಾಮಸ್ಥರು ಸಂಜೆ 4 ಗಂಟೆ ವೇಳೆಗೆ ಶ್ರೀ ಗಾದ್ರಿ ಪಾಲನಾಯಕ ಸ್ವಾಮಿಯ ದೇವರ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರಿಷಿನ ಭಂಡಾರವನ್ನು ಚೆಲ್ಲಿದರು. ನಂತರ ಮಣೇವು ಕಾರ್ಯ ಜರಗಿತು, ನಂತರ ಊರ ಹೊರಗಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ದೇವರ ಎತ್ತುಗಳನ್ನು ಓಡಿಸುವ ಮೂಲಕ ಈ ಬಾರಿಯ ದೀಪಾವಳಿ ಹಬ್ಬ ಹಾಗೂ ದೀವಳಿಗೆ ಹಬ್ಬವನ್ನು ಸಂಭ್ರಮ ಸಡಗರದಿಂದ
ಆಚರಿಸಿದರು.

ಇದೇ ಸಂದರ್ಭದಲ್ಲಿ ಜಾಗನೂರಹಟ್ಟಿ ಗ್ರಾಮದ ಗುರು- ಹಿರಿಯರು ಸಮಸ್ತ ಊರಿನ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಕನ್ನಯ್ಯನಹಟ್ಟಿ ಮಾದಯ್ಯನಹಟ್ಟಿ, ಚನ್ನಬಸಯ್ಯನಹಟ್ಟಿ, ಗೌಡಗೆರೆ, ಕವಲಹಳ್ಳಿ, ಗ್ರಾಮಸ್ಥರು ಭಾಗವಹಿಸಿ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸಿದರು.

About The Author

Namma Challakere Local News
error: Content is protected !!