ಪಟ್ಟಣಕ್ಕಿಲ್ಲ ಕಸ ವಿಲೇವಾರಿ ಘಟಕ ಪಟ್ಟಣದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ ಮುಸ್ಲಿಂ ಮುಖಂಡ ಸೈಯದ್ ಕೌಸರ್ ಆಕ್ರೋಶ.

ನಾಯಕನಹಟ್ಟಿ:: ಪಟ್ಟಣದಲ್ಲಿ ಕಸ ವಿಲೇವಾರಿ ಘಟಕಕ್ಕೆ ಕೂಡಲೇ ಸ್ಥಾಪಿಸಬೇಕು ಎಂದು ಮುಸ್ಲಿ ಮುಖಂಡ ಸೈಯದ್ ಕೌಸರ್ ಅಗ್ರಹಿಸಿದ್ದಾರೆ.

ಗುರುವಾರದಂದು ಪಟ್ಟಣದ ತೊರೆಕೋಲಮ್ಮಹಳ್ಳಿರಸ್ತೆಯಲ್ಲಿರುವ ರಾಶಿ ರಾಶಿ ಕಸವನ್ನು ವೀಕ್ಷಣೆ ಮಾಡಿ ಮಾತನಾಡಿದರು.ಈ ರಸ್ತೆಯಲ್ಲಿ ಪ್ರತಿದಿನ ವಿದ್ಯಾರ್ಥಿಗಳು, ಯುವಕರು,ವೃದ್ಧರು ಓಡಾಡುತ್ತಿದ್ದೂ ಪ್ರತಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.ಈ ಜಾಗದಲ್ಲಿ ಈಗಾಗಲೇ ಸಾಕಷ್ಟು ಅಪಘಾತ ಆಗಿ ಓರ್ವ ಸಾವನ್ನಪ್ಪಿದ್ದಾನೆ.ಇಷ್ಟಾದ್ರೂ ಕೂಡ ಸ್ಥಳೀಯ ಪಟ್ಟಣ ಪಂಚಾಯತಿ ಅಧಿಕಾರಿಗಳು ಕ್ಯಾರಿ ಎನ್ನುತ್ತಿಲ್ಲ.

ಗಬ್ಬು ನಾರುವ ಈ ಕಸದ ರಾಶಿಯಲ್ಲಿ ಹಂದಿ ನಾಯಿಗಳದೇ ದರ್ಬಾರ್ ಆಗಿದೆ. ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಅಡ್ಡದಿಡ್ಡಿಯಾಗಿ ಹಂದಿ ನಾಯಿಗಳು ಬರುವುದರಿಂದ ವಾಹನ ಸವಾರರು ಬಿದ್ದು ಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಕಸವನ್ನ ತೆರವುಗೊಳಿಸಬೇಕು ಮತ್ತು ಸೂಕ್ತ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

About The Author

Namma Challakere Local News
error: Content is protected !!