ಚಳ್ಳಕೆರೆ; ಎಲ್ಲಾ ಗ್ರಾಮ ಹಾಗೂ ವಾರ್ಡ್ಗಳಲ್ಲಿ ಜಾತಿ ಭೇಧ ಮರೆತು ಸ್ನೇಹ ಸೌಹಾರ್ದತೆಯಿಂದ ಬದುಕಬೇಕು, ಜಾತಿನಿಂದನೆ ಮಾಡಿದರೆ, ದಲಿತ ಸಮುದಾಯದವರು ಠಾಣೆಗೆ ಬಂದು ದೂರು ನೀಡಬೇಕು ಎಂದು ಇನ್ಸ್ಪೆಕ್ಟರ್ ಬಿಜಿ.ಉಮೇಶ್ ಕಿವಿಮಾತು ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆವತಿಯಿಂದ ಆಯೋಜಿಸಿದ್ದ ದಲಿತ ದಿನಾಚರಣೆಯನ್ನು ಮುಖಂಡರೊಂದಿಗೆ ಸಭೆಯಲ್ಲಿ ಭಾಗವಸಿ ಮಾತನಾಡಿದರು. ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ತಿಂಗಳು ದಲಿತ ದಿನಾಚರಣೆಯನ್ನು ಪೊಲೀಸ್ ಇಲಾಖೆವತಿಯಿಂದ ಆಚರಣೆ ಮಾಡಲಾಗುತ್ತಿದ್ದು. ಆದ್ದರಿಂದ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಬಾಲ್ಯವಿವಾಹ ಮಾಡದೆ ಶಿಕ್ಷಣ ಕೊಡಿಸಿದರೆ ಬಡತನದಿಂದ ದೂರವಿರಲು ಸಾಧ್ಯ ಎಂದರು.
ಮಾಜಿ ತಾಪಂ.ಸದಸ್ಯ ಶೀನಿವಾಸ್ ಮಾತನಾಡಿ ನಗರದ ಬಹುತೇಕ ಖಾಲಿ ನಿವೇಶನಗಳ ಲೇಹೌಟ್‌ಗಳಲ್ಲಿ ಕುಡುಕರ ಹಾವಳಿಯಿಂದ ಅಕ್ಕ ಪಕ್ಕ ನಿವಾಸಿಗಳಿಗೆ ಹಾಗೂ ಮಹಿಳೆಯರು ಮುಜುಗರ ಪಡುವಂತಾಗಿದೆ ನಗರದಲ್ಲಿ ಪೊಲೀಸ್ ಬೀಟ್ ಹೆಚ್ಚಿಸುವಂತೆ ತಿಳಿಸಿದರು.
ದಲಿತ ಮುಖಂಡ ಡಿ.ಚಂದ್ರು ಮಾತನಾಡಿ ತಾಲೂಕಿನಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಣ್ಣ ಪುಟ್ಟ ಗಲಾಟೆಗಳು ಸಂಭವಿಸಿ ಠಾಣೆಗೆ ಬಂದರೆ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ತಿಳಿಗೊಳಿಸಿ, ಅದೇ ರೀತಿ ಇತ್ತೀಚೆಗೆ ನಗರದಲ್ಲಿ ಬೈಕ್ ವೀಲ್ ಮಾಡುವವರ ಮೇಲೆ ನಿಗಾವಹಿಸಿ, ಶಬ್ದ ಮಾಲೀನ್ಯ ಮಾಡುವ ವಾಹನಗಳ ಮೇಲೆ ನಿಗಾವಹಿಸಿ ಇದಕ್ಕೆ ಕಡಿವಾಣ ಹಾಕುವಂತೆ ತಿಳಿಸಿದರು
ಮುಖಂಡ ಸೂರನಾಯಕ ಮಾತನಾಡಿ ನಗರದ ನೆಹರು ವೃತ್ತದಲ್ಲಿ ಸಿಸಿ ಕ್ಯಾಮಗಳಲ್ಲಿದೆ ಇರುವುದರಿಂದ ಮೊಬಲ್, ಹಣ ಕದಿಯುವ ಕಳ್ಳರ ಸಂಖ್ಯೆ ಹೆಚ್ಚಿದ್ದು, ವ್ಯಾಪಾರಸ್ತರು ಪುಟ್ ಬಾತ್‌ಗಳನ್ನು ಹಾಗೂ ರಸ್ತೆಗಳನ್ನು ಅಕ್ರಮಿಸಿಕೊಂಡಿರುವುದರಿAದ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಪಿಕ್ ಕಿರಿಕಿರಿಯಾಗುತ್ತಿದ್ದು ಸರಿಪಡಿಸುವಂತೆ ತಿಳಿಸಿದರು.
ದಲಿತ ಮುಖಂಡ ನಲಗೇತನಹಟ್ಟಿ ನಾಗರಾಜು ಮಾತನಾಡಿ ತಾಲೂಕಿನ ಹಲವು ಗ್ರಾಮಗಳ ದಲಿತ ಕಾಲೋನಿಯಲ್ಲಿ ಅಕ್ರಮ ಮಧ್ಯಮಾರಾಟ ಮಾಡುತ್ತಿರುವರ ಬಗ್ಗೆ ಮಾಹಿತಿ ಪಡೆದು ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ಮುಖಂಡ ಬೀಮಣ್ಣ ಮಾತನಾಡಿ ನಗರದ ಸೋಮಗುದ್ದು ರಸ್ತೆಯಲ್ಲಿ ಕಾಲೇಜು ಪ್ರಾರಂಭ ಹಾಗೂ ಬಿಡುವಾಗ ಪೋಕರಿಗಳು ಕಾಲೇಜು ಹುಡಗಿಯನ್ನು ಚುಡಾಯಿಸುತ್ತಾರೆ ಹಾಗೂ ಗಾಂಧಿನಗರ, ಅಂಬೇಡ್ಕರ್ ನಗರ ಸೇರಿದಂತೆ ಕೊಳಚೆ ಪ್ರದೇಶದಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುವುದರಿಂದ ಕುಡುಕರ ಹಾವಳಿಯಿಂದ ಶಾಂತಿ ನೆಮ್ಮದಿ ಹಾಳಾಗುತ್ತಿದೆ ಎಂದರು.
ಬೀಮನಕೆರೆ ಶಿವಮೂರ್ತಿ ಮಾತನಾಡಿ ದಲಿತ ಸಮುದಾಯಕ್ಕೆ ಇರುವ ಕಾನೂನುಗಳು ಪುಸ್ತಕದಲ್ಲಿವೆ ಅವುಗಳು ಜಾರಿಯಾಗುತ್ತಿಲ್ಲ ದಲಿತ ಸಂಘಟನೆಯಿAದ ಆರ್ಥಿಕ ಸಮೀಕ್ಷೆ ಮಾಡಲು ಸಮಾಜದ ಎಲ್ಲಾ ವರ್ಗದ ಜಾತಿಯ ಹಟ್ಟಿಗಳಲ್ಲಿ ಪ್ರವೇಶ ಮಾಡುವ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಕಣ್ಣಾಯಿಸಿ
ಸರಕಾರದ ಆದೇಶ ಪಾಲಿಸುವ ಅಧಿಕಾರಿಗಳು ಪ್ರತಿ ತಿಂಗಳು ದಲಿತ ದಿನಾಚರಣೆ ಮಾಡಬೇಕೆಂಬ ಸರಕಾರದ ನಿಯಮವಿದೆ ಅದರಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿತಿಂಗಳು ಇಂತಹ ದಲಿತರ ಸಭೆ ಆಯೋಜನೆ ಮಾಡಿದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ, ಕೇವಲ ಠಾಣೆಯಲ್ಲಿ ನೆಪ ಮಾತ್ರಕ್ಕೆ ದಲಿತರ ದಿನಾಚರಣೆ ಆಚರಿಸದೆ ಮುಂದಿನ ದಲಿತ ದಿನಾಚರಣೆಯನ್ನಾದರೂ ನೊಂದವರ, ತುಳಿತಕ್ಕೆ ಒಳಗಾದವರ ಸಮಕ್ಷಮದಲ್ಲಿ ತಾಲೂಕಿನ ಯಾವುದಾದರೂ ಒಂದು ಗ್ರಾಮ, ವಾರ್ಡನÀಲ್ಲಿ ಈ ದಲಿತ ದಿನಾಚರಣೆ ಆಚರಿಸಿದರೆ ಸರಕಾರದ ಆಶಯ ಈಡೇರಿದಂತಾಗುತ್ತಾದೆ.
ಪಿಎಸ್‌ಐ ತಿಮ್ಮಣ್ಣ ಮಾತನಾಡಿ ಅಫಘಾತ, ಗಲಾಟೆ, ಟ್ರಾಫಿಕ್, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ತುರ್ತು ಸಮಸ್ಯೆಗಳಿಗೆ 112 ಕರೆ ನೀಡಿದರೆ ತುರ್ತು ವಾಹನ ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ಬರಲಾಗುತ್ತಿದೆ ಎಂದರು.
ಈ ಸಭೆಯಲ್ಲಿ ಭೀಮಣ್ಣ, ಚಂದ್ರು, ಸೊಂಡೆಕೆರೆಶಿವಣ್ಣ, ನಲಗೇತನಹಟ್ಟಿ ನಾಗರಾಜ್, ಪ್ರಿಯಾದರ್ಶನಿ, ವಕೀಲಾರದ ಬೋರನಾಯಕ, ಭಿಮನಕೆರೆ ಶಿವಮೂರ್ತಿ, ತಿರುಮಲೇಶ್, ಚನ್ನಿಗರಾಮಯ್ಯ, ಮಂಜುನಾಥ್, ವೆಂಕಟೇಶ್, ವಿನೋದ್ ಕುಮಾರ್, ಹಲವು ದಲಿತ ಮುಖಂಡರು ಉಪಸ್ಥಿತರಿದ್ದರು.