ಚಳ್ಳಕೆರೆ : ಕೋರೊನ ಹಿನ್ನೆಲೆಯಲ್ಲಿ ಎರಡು ವರ್ಷ ಶ್ರೀ ಕೃಷ್ಣಾ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲು ಆಗಲಿಲ್ಲ ಆದರೆ ಈ ವರ್ಷ ಜಯಂತಿಯನ್ನು ಸಡಗರ ಸಂಭ್ರಮದಿAದ ಆಚರಣೆ ಮಾಡಬೇಕಾಗುತ್ತದೆ ಇದಕ್ಕೆ ಸಮುದಾಯದ ಎಲ್ಲರ ಸಹಕಾರ ಬೇಕು ಎಂದು ಶ್ರೀ ಕೃಷ್ಣ ಯಾದವ್ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್ ಹೇಳಿದರು.
ನಗರದ ತ್ಯಾಗರಾಜ್ ನಗರದ ಶ್ರೀಕೃಷ್ಣ ಯಾದವ್ ಹಾಸ್ಟೆಲ್‌ನಲ್ಲಿ ಶ್ರೀಕೃಷ್ಣ ಜಯಂತಿ ಕುರಿತು ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು ಆಗಸ್ಟ್ 20ರಂದು ಶ್ರೀ ಕೃಷ್ಣ ಜಯಂತೋತ್ಸವ ಕಾರ್ಯಕ್ರಮವನ್ನು ನಗರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ.
ತಾಲ್ಲೂಕಿನ ಗ್ರಾಮ ಗ್ರಾಮಗಳಿಗೆ ತೆರೆಳಿ ಶ್ರೀಕೃಷ್ಣ ಜಯಂತೋತ್ಸವ ವಿಚಾರವಾಗಿ ಪ್ರತಿಯೊಬ್ಬರಿಗೂ ತಿಳಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಇರುವ ಸದಸ್ಯರಿಗೂ ಜಯಂತಿಯ ಮಾಹಿತಿ ತಿಳಿಸಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಬೇಕು.
ಈ ಸಮಯದಲ್ಲಿ ಕೆಎಂಎಫ್ ನ ನಿರ್ದೇಶಕ ಹಾಗೂ ಸಮುದಾಯದ ಮುಖಂಡರಾದ ಸಿ.ವೀರಭದ್ರಬಾಬು, ಮಾತನಾಡಿ ಜಯಂತಿ ಆಚರಣೆಗೆ ಎಲ್ಲಾರು ಮುಂದಾಗಬೇಕು, ಸಮುದಾಯದ ಹಿನ್ನೆಲೆ ಸಭೆಯಲ್ಲಿ ಅಭಿವ್ಯಕ್ತಪಡಿಸಬೇಕು ಇಂದಿನ ಆಧುನಿಕ ಜಗತ್ತಿಗೆ ಉಣಬಡಿಸಬೇಕಾದ ಅನಿವಾರ್ಯತೆ ಇದೆ ಎಂದರು,
ಹಿರಿಯ ಮುಖಂಡರಾದ ಬಿ.ವಿ.ಸಿರಿಯಣ್ಣ ಹಟ್ಟಿರುದ್ರಪ್ಪ, ಸಂಘದ ಉಪಾಧ್ಯಕ್ಷರಾದ ಚಿಕ್ಕಣ್ಣ ಮುಖಂಡರಾದ ವೆಂಕಟೇಶ ಯಾದವ್, ಚಿತ್ರಾವತಿ, ಪೂರ್ವಬಾವಿ ಕುರಿತು ಮಾತನಾಡಿದರು.
ಈ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಮುಖಂಡರಾದ ಹೊನ್ನೂರು ಗೋವಿಂದಪ್ಪ, ಹುಲಿಕುಂಟೆ ಕರಿಯಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಮುಖಂಡ ಗದ್ದಿಗೆತಿಪ್ಪೇಸ್ವಾಮಿ, ಟಿಎಪಿಎಂಸಿ ಅಧ್ಯಕ್ಷ ಕೆ.ಟಿ.ನಿಜಲಿಂಗಪ್ಪ, ಶ್ರೀಕೃಷ್ಣ ಮಹಿಳಾ ಮಂಡಳಿ ಅಧ್ಯಕ್ಷೆ ಚಿತ್ರಾವತಿ ಸದಸ್ಯರಾದ ಚಾರುಮತಿ. ಸರೋಜಮ್ಮ, ಇಂದ್ರಮ್ಮ, ಜಯಮ್ಮ, ಮುಖಂಡರಾದ ಮುಡಲಗಿರಿಯಪ್ಪ, ಮಂಜಣ್ಣ, ತಿಪ್ಪೇಸ್ವಾಮಿ, ಚಿಕ್ಕಣ, ಜಿ.ಕೆ.ವೀರಣ್ಣ, ದಾವಣಗೆರೆ ಬಸಣ್ಣ ಕಾಂತರಾಜ್ ಹುಲಿಕುಂಟೆ, ಲಾಯರ್ ಶಶಿ, ಮಂಜುನಾಥ, ನಾಗರಾಜ್ ಚಿಕ್ಕಣ್ಣ, ವಿರೇಶ, ಕಾಟಪ್ಪನಹಟ್ಡಿ ವಿರೇಶ, ಲಾಯರ್‌ಕೆ.ಎನ್.ನಾಗರಾಜ್, ಮಂಜುನಾಥ್, ವೀರಣ್ಣ, ಶ್ರೀಕಂಠಪ್ಪ, ಹಾಗೂ ಸಮುದಾಯದ ಮುಖಂಡರು ಯುವ ಮುಖಂಡರು ಪಾಲ್ಗೊಡಿದ್ದರು.