ಚಿತ್ರದುರ್ಗ, ಜು.24: ಬೀದಿ‌ನಾಯಿ ಕಡಿದು 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ನಗರದ ಮೇದೆಹಳ್ಳಿ ಸಮೀಪದ ಬಿಳಿಕಲ್ಲು ನಾಯಕರ ಹಟ್ಟಿಯಲ್ಲಿ‌ ನಡೆದಿದೆ.


ಯಶವಂತ್ (8) ಮೃತಪಟ್ಟ ದುರ್ಧೈವಿ.
ಮೇದೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಕಲ್ಲು ನಾಯಕರ ಹಟ್ಟಿ ಬಡಾವಣೆಯಲ್ಲಿ ವಾಸವಿರುವ ಕೇಶವ ರೇಖಾ ಅವರ ಮಗ ಯಶವಂತ್ ಕಳೆದ ಎರಡು ದಿನಗಳ ಹಿಂದೆ ಮನೆಯ ಮುಂಭಾಗದಲ್ಲಿ ಆಟ ಆಡುತ್ತಿರುವಾಗ ಬೀದಿ ನಾಯಿಯೊಂದು ಯಶವಂತ್ ನ ಕಣ್ಣಿಗೆ ಐದಾರು ಬಾರೀ ಕಚ್ಚಿದೆ.

ಪರಿಣಾಮ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಯಶವಂತ್ ಕುಸಿದು ಬಿದ್ದಿದ್ದಾನೆ. ಕೂಡಲೇ ಪೋಷಕರು ಯಶವಂತ್ ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ವೈದ್ಯರು ಬಾಲಕನ ಕಣ್ಣಿಗೆ ನಾಯಿ ಕಚ್ಚಿರುವುದರಿಂದ ವಿಷ (ನಂಜು) ಬಾಲಕನ ಮೇದುಳಿಗೆ ಏರಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದು, ಅದರಂತೆ ನಿನ್ನೆ ರಾತ್ರಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಯಶವಂತ್ ಮೃತಪಟ್ಟಿದ್ದಾನೆ.
ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

About The Author

Namma Challakere Local News

You missed

error: Content is protected !!