ಚಿತ್ರದುರ್ಗ: ಹೋಂ ವರ್ಕ್ ಮಾಡಲಿಲ್ಲವೆಂದು
ಅಮಾನುಷವಾಗಿ ಥಳಿಸಿದ ಶಿಕ್ಷಕ
ಚಿತ್ರದುರ್ಗದ ನ್ಯೂಲಿಟಲ್ ಫೇರಿಸ್ ಶಾಲೆಯಲ್ಲಿ ಮೂರನೇ
ತರಗತಿ ವಿದ್ಯಾರ್ಥಿಯೊಬ್ಬನಿಗೆ ಹೋಂವರ್ಕ್ ಮಾಡಿಲ್ಲವೆಂದು
ಅಮಾನುಷವಾಗಿ ಥಳಿಸಲಾಗಿದೆ. ಈ ಘಟನೆ ಖಂಡಿಸಿ ಕರುನಾಡ
ವಿಜಯಸೇನೆ ಶಾಲೆಯ ಆಡಳಿತಾಧಿಕಾರಿಗಳನ್ನು ಬಂಧಿಸುವಂತೆ
ಪ್ರತಿಭಟನೆ ನಡೆಸಿದೆ. ಶಾಲೆಯವರು ಹೊರಗೆ ನಿಲ್ಲಿಸಿದಾಗ ಮೈ
ಮೇಲೆ ಗ್ಲಾಸ್ ಬಿದ್ದು ಗಾಯವಾಗಿದೆ ಎಂದು ಸುಳ್ಳು ಹೇಳುತ್ತಾರೆ
ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ
ಪ್ರಕರಣವು ಚಳ್ಳಕೆರೆ ನಾಯಕನಹಟ್ಟಿ ವೇದಾಧ್ಯಯನ ಶಾಲೆಯಲ್ಲಿ
ನಡೆದ ವಿದ್ಯಾರ್ಥಿ ಹಲ್ಲೆ ಪ್ರಕರಣ ಮಾಸುವ ಮುನ್ನವೇ ನಡೆದಿದೆ.

About The Author

Namma Challakere Local News
error: Content is protected !!