ಚಳ್ಳಕೆರೆ: ಮೀಟರ್ ರೀಡರ್ ಯಡವಟ್ಟಿನಿಂದ 17
ಸಾವಿರ ವಿದ್ಯುತ್ ಬಿಲ್ ಬಂತು
ಚಳ್ಳಕೆರೆಯ ಗಾಂಧಿ ನಗರದಲ್ಲಿ ವಿದ್ಯುತ್ ಮೀಟರ್ ರೀಡರ್‌ನ
ಎಡವಟ್ಟಿನಿಂದಾಗಿ ಕೆಲ ನಿವಾಸಿಗಳಿಗೆ 5 ರಿಂದ 17 ಸಾವಿರ
ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಬಂದಿದೆ. ಸರ್ಕಾರ
ಗ್ಯಾರಂಟಿ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತಿದ್ದರೂ, ಈ
ರೀಡರ್‌ನಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಉಚಿತ ವಿದ್ಯುತ್
ನೀಡುವ ಸರ್ಕಾರದ ಯೋಜನೆಗೆ ರೀಡರ್‌ನಿಂದ ಆಗಿರುವ ಈ
ಅಡಚಣೆಯನ್ನು ಸರಿಪಡಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

