ಹೊಸದುರ್ಗ: ಶಾಸಕ ಬಿ. ಜಿ. ಗೋವಿಂದಪ್ಪ ವಿರುದ್ಧ
ದೂರು ದಾಖಲು
ಹೊಸದುರ್ಗ ಶಾಸಕ ಬಿ. ಜಿ. ಗೋವಿಂದಪ್ಪ ಅವರು ತಮ್ಮ
ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಹಿರಿಯೂರು ವಿವಿ
ಸಾಗರ ಜಲಾಶಯದ ಗೇಟ್ ಗಳನ್ನು ತಾವೇ ಮುಂದೆ ನಿಂತು
ತೆರೆಸಿದ್ದಾರೆ ಎಂದು ರೈತ ಹಿತರಕ್ಷಣಾ ಹಾಗೂ ನೀರಾವರಿ ಹೋರಾಟ
ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆರೋಪಿಸಿದ್ದಾರೆ. ಈ
ಸಂಬಂಧ ಗುರುವಾರ ಶಾಸಕರ ವಿರುದ್ಧ ದೂರು ದಾಖಲಿಸಲಾಗಿದೆ.
ಶಾಸಕರು ಜಲಾಶಯದ ತೂಬುಗಳನ್ನು ತೆರೆಸಿದ್ದಾರೆ ಎಂದು
ರಮೇಶ್ ಮಾಧ್ಯಮಗಳಿಗೆ ತಿಳಿಸಿದರು.

